ಸ್ವಾತಂತ್ರ್ಯ ಹಕ್ಕಲ್ಲ ಅದು ಜವಾಬ್ದಾರಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇದೀಗ ಸ್ವಾತಂತ್ರೋತ್ಸವದ 25 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ನಮಗೆ ದೊರೆತ ಸ್ವಾತಂತ್ರ್ಯ ಸುಲಭವಾಗಿ ಬಂದAತದ್ದಲ್ಲ. ಇದು ಸಹಸ್ರಾರು ಜನರ ಬಲಿದಾನಕ್ಕೆ ಸಂದ ಗೌರವ. ನಾವು ಇಂದು ಅನುಭವಿಸುತ್ತಿರುವ ಈ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಶತಮಾನಗಳ ಕಾಲ ಹೋರಾಡಿ ಸುಖ, ನೆಮ್ಮದಿ, ಪ್ರಾಣ, ಆಸ್ತಿ – ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ನಾವು ಎಂದಿಗೂ ಮರೆಯಬಾರದು.ಸ್ವಾತಂತ್ರ್ಯ ಹೋರಾಟಗಾರರಲ್ಲಿ ಧೈರ್ಯ, ಛಲದೊಂದಿಗೆ ತಮ್ಮ […]

ಪಿಎಂ ದಿಶಾ ಯೋಜನೆಯ ಪ್ರಯೋಜನ ಪಡೆಯಿರಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಸಂವಹನ ತಂತ್ರಜ್ಞಾನ (ಕಮ್ಯುನಿಕೇಶನ್ ಟೆಕ್ನಾಲಜಿ) ಮೊಬೈಲ್ ಆವಿಷ್ಕಾರದೊಂದಿಗೆ ನಾವು ಊಹಿಸುವುದಕ್ಕಿಂತ ವೇಗವಾಗಿ ಬೆಳೆದಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಮನೆಯಲ್ಲಿ ಟೆಲಿಫೋನ್ ಹಾಕಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ಮತ್ತು ಟೆಲಿಫೋನ್ ಇದ್ದರೂ ದೂರದ ಊರುಗಳಿಗೆ ಕರೆ ಮಾಡಬೇಕೆಂದರೆ ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ನಂತರ ಎಸ್.ಟಿ.ಡಿ. ಸೌಲಭ್ಯ ಬಂದರೂ ಎಲ್ಲ ಟೆಲಿಫೋನ್‌ಗಳಿಗೂ ಆ ಭಾಗ್ಯ ಇರಲಿಲ್ಲ. ತೊಂಭತ್ತರ ದಶಕದಲ್ಲಿ ಪ್ರಾರಂಭವಾದ ಇ-ಮೇಲ್, ಇಂಟರ್‌ನೆಟ್ ತಂತ್ರಜ್ಞಾನ ಜಗತ್ತಿನಲ್ಲಿ ಸಂವಹನ ಕ್ರಾಂತಿಯನ್ನು ಮಾಡಿಸಿತು. ಇದರಿಂದ ಒಬ್ಬರಿಗೊಬ್ಬರು […]

ವಿದ್ಯಾರ್ಥಿಗಳ ಭವಿಷ್ಯದ ‘ಯಶೋ’ಗಾಥೆಗೆ ಭದ್ರ ಬುನಾದಿ ಹಾಕಿದವರು

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಒಂದು ದೇಶದ ಸಮಗ್ರ ಅಭಿವೃದ್ಧಿಗೂ ಅಲ್ಲಿಯ ಶಿಕ್ಷಣ ವ್ಯವಸ್ಥೆಗೂ ಒಂದು ರೀತಿಯ ನೇರ ಸಂಬAಧವಿದೆ. ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಗುಣಮಟ್ಟದಲ್ಲಿ ವಿಶ್ವದರ್ಜೆಗೇರಿಸುವ ಪ್ರಯತ್ನಗಳಾಗುತ್ತಿವೆ. ಡಿಜಿಟಲ್ ಇಂಡಿಯಾದ ಈ ಕಾಲಘಟ್ಟದಲ್ಲಿ ಡಿಜಿಟಲ್ ಶಿಕ್ಷಣ ಅನಿವಾರ್ಯ ಮತ್ತು ಅವಕಾಶವು ಆಗಿದೆ. ಕೋವಿಡ್ ಸಂದರ್ಭದಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆಯಾದ ಡಿಜಿಟಲ್ ಶಿಕ್ಷಣ ಇಂದು ಪರಿಹಾರ ಮತ್ತು ಫಲಪ್ರದ […]

ಹೆಣ್ಣಿನ ಬದುಕಿನ ಬೆಳಕು – ಸೋದರ ಪ್ರೇಮ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದು ಕಾಲ ಇತ್ತು, ಸಾಧಾರಣ ನನ್ನ ಅಮ್ಮನ ಕಾಲ ಅಂದರೆ ಸುಮಾರು 60-70 ವರ್ಷಗಳ ಹಿಂದೆ. ಆಗ ನಾವಿಬ್ಬರು ನಮಗಿಬ್ಬರು ಎಂಬ ಘೋಷಣೆ ಇರಲಿಲ್ಲ. ಮಾತ್ರವಲ್ಲ, ಅದಕ್ಕೆ ಬೇಕಾದ ವ್ಯವಸ್ಥೆಗಳೂ ಇರಲಿಲ್ಲ. ಹಾಗಾಗಿ ಹೆಂಗಸರು ಎರಡು ವರ್ಷಕ್ಕೊಮ್ಮೆ ಬಸರಿ-ಬಾಣಂತನದ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತಿತ್ತು. ಆಗ ಅವಿಭಕ್ತ ಕುಟುಂಬಗಳೂ ಇದ್ದುದರಿಂದ ಅಕ್ಕ-ತಂಗಿಯರು ಹೆರಿಗೆಗೆ ಬಂದರೆ ಅಪ್ಪನ ಜತೆ ಅಣ್ಣ-ತಮ್ಮಂದಿರು ಪೂರ್ಣ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದರು. ಹೆಚ್ಚಿನ ಪ್ರಪಂಚ ಜ್ಞಾನವಿಲ್ಲದೆ ಅಮ್ಮ ಬಾಣಂತಿಯ ಎಣ್ಣೆ ನೀರು, ಪಥ್ಯದ […]

ತಾಂತ್ರಿಕತೆಯೆಂಬ ಮಂತ್ರ ದಂಡ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಹಿಂದೆ ನಾವೆಲ್ಲ ಮಕ್ಕಳಾಗಿದ್ದಾಗ ಬಂಧು-ಮಿತ್ರರ ಸಂದೇಶ ಹೊತ್ತ ಪತ್ರಕ್ಕಾಗಿ ವಾರಗಟ್ಟಲೆ ಕಾಯುತ್ತಿದ್ದೆವು. ಪತ್ರ ಬರೆದು ಮರುತ್ತರಕ್ಕೆ ಕಾಯುತ್ತಿದ್ದ ಕ್ಷಣಗಳು ಮರೆಯಲಾರದಂಥವು. ಯಾರ ಜೊತೆಗಾದರೂ ತುರ್ತಾಗಿ ಮಾತನಾಡಬೇಕಿದ್ದರೆ, ಸಂದೇಶ ನೀಡಬೇಕಿದ್ದರೆ ಟ್ರಂಕ್ ಕಾಲ್ ಬುಕ್ ಮಾಡಿ ದಿನಗಟ್ಟಲೆ ಕಾಯಬೇಕಾದ ಸಂದರ್ಭಗಳಿದ್ದವು. ಆ ದಿನಗಳಲ್ಲಿ ಇಂದಿನಷ್ಟು ಸರಕಾರಿ ಸೇವೆಗಳು ಇರಲಿಲ್ಲ. ಇದ್ದರೂ ಸೇವೆಗಳನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕು, ಒಂದು ಸಾರಿ ಹೋದರೆ ಸಾಲದು, ನಾಲ್ಕೈದು ಬಾರಿ ಹೋಗಬೇಕು, ಒಮ್ಮೆ ಹೋಗಿ ಬರಲು ಸಾಕಷ್ಟು ದುಡ್ಡು […]

ಸಾಮೂಹಿಕ ವಿವಾಹಗಳ ರೂವಾರಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವದಲ್ಲಿ ಪ್ರಾರಂಭಗೊAಡ ‘ಸಾಮೂಹಿಕ ವಿವಾಹ’ ಕಾರ್ಯಕ್ರಮಕ್ಕೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. ದಾನ ಪರಂಪರೆಯ ಧರ್ಮಸ್ಥಳ ಕ್ಷೇತ್ರದ ‘ಹೆಗ್ಗಡೆ’ ಜವಾಬ್ದಾರಿಯನ್ನು ೧೯೬೮ರಲ್ಲಿ ವಹಿಸಿಕೊಂಡ ಪೂಜ್ಯ ವೀರೇಂದ್ರ ಹೆಗ್ಗಡೆಯವರದ್ದು ದೂರದೃಷ್ಟಿಯ ಮನೋಭಾವ. ಅಗತ್ಯವಿದ್ದವರಿಗೆ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಅವರು ದಾರ್ಶನಿಕರೇ ಸರಿ. ಎರಡು ಹೊತ್ತಿನ ಊಟ ಮಾಡುವುದೇ ಕಷ್ಟವಾಗಿದ್ದ ಆ ದಿನಗಳಲ್ಲಿ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ವಿವಾಹ […]

ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ‘ಜ್ಞಾನವಿಕಾಸ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಹೆಣ್ಣು ಸಮಾಜದ ಕಣ್ಣು ಎನ್ನುವುದು ಅತ್ಯಂತ ಅರ್ಥಗರ್ಭಿತವಾದ ಮಾತು. ಆದರೆ ಎಷ್ಟೋ ಸಂದರ್ಭದಲ್ಲಿ ಅವಕಾಶವಂಚಿತರಾದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಅಜ್ಞಾನದ ಅಂಧಕಾರದಿAದಾಗಿ ಕಣ್ಣನ್ನೇ ತೆರೆಯಲಾಗದಂತಹ ಸ್ಥಿತಿಯಲ್ಲಿರುವಾಗ ಸಮಾಜದ ಕಣ್ಣಾಗುವುದು ಎನಿತು? ಗ್ರ‍್ರಾಮೀಣ ಪ್ರದೇಶದಲ್ಲಿ ಇದು ಸಾಮಾನ್ಯ. ಅದರಲ್ಲೂ ಸಂಸಾರಸ್ಥ ಮಹಿಳೆಯರ ಸಂಖ್ಯೆ ಬಹಳಷ್ಟು. ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣವೇ ಕಷ್ಟ, ಇನ್ನು ಸಂಸಾರಸ್ಥ ಮಹಿಳೆಯರಿಗೆ ಇನ್ನೆಲ್ಲಿ ಶಿಕ್ಷಣ? ಶತಮಾನಗಳಿಂದಲೂ ಇದ್ದ ಈ […]

ಆನ್‌ಲೈನ್‌ನಲ್ಲೂ ಹುಬ್ಬಳ್ಳಿ ಮಸಾಲ ಘಮ

ಹುಬ್ಬಳ್ಳಿ, ವ್ಯಾಪಾರ – ವಹಿವಾಟಿಗೆ ಹೆಸರುವಾಸಿ. ‘ಹುಬ್ಬಳ್ಳಿ ಮಸಾಲ’ ತಯಾರಿಸುವ ಮೂಲಕ ‘ಹುಬ್ಬಳ್ಳಿ ಮಸಾಲ ಅಂದ್ರೆ ಅಜ್ಜಿ ಕೈರುಚಿ ಇದ್ದಂಗ್’ ಎಂದು ಬ್ರ್ಯಾಂಡ್ ನೇಮ್ ಸೃಷ್ಟಿಸಿ ಆನ್‌ಲೈನ್‌ನಲ್ಲಿಯೂ ಮಾರುಕಟ್ಟೆ ಕಂಡುಕೊ0ಡವರು ಜ್ಯೋತಿ ಇಚ್ಚಂಗಿ. ಇವರು ತಯಾರಿಸುವ ಖಾರದಹುಡಿ ಮತ್ತು ಮಸಾಲಹುಡಿಯ ಘಮ ನಮ್ಮ ರಾಜ್ಯವನ್ನು ದಾಟಿ ಎಲ್ಲೆಡೆ ಹರಡಿಕೊಂಡಿದೆ. ಮೂರು ವರ್ಷಗಳ ಹಿಂದೆ ಮಿಕ್ಸರ್‌ನಲ್ಲಿ ದಿನಕ್ಕೆ ಎರಡು, ಮೂರು ಕೆ.ಜಿ.ಯಷ್ಟು ಮಸಾಲೆಹುಡಿ ತಯಾರಿಸಿ ಮಾರಾಟ ಮಾಡುತ್ತಿದ್ದವರು ಇದೀಗ ತಮ್ಮ ಮನೆಯಲ್ಲೆ ‘ಸತ್ಯಜ್ಯೋತಿ ಹೋಮ್ ಪ್ರಾಡಕ್ಟ್ಸ್’ ಎಂಬ ಮಸಾಲೆಹುಡಿ […]

ಮನೆ ಕಟ್ಟಿ ನೋಡು

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಮಾನವರ ಪ್ರಾಥಮಿಕ ಅಗತ್ಯತೆಗಳಲ್ಲಿ ಆಹಾರ, ಉಡುಪು ಮತ್ತು ವಸತಿ (ರೋಟಿ, ಕಪಡಾ ಔರ್ ಮಕಾನ್) ಇವು ಮೂರು ಪ್ರಮುಖವಾದದ್ದು. ಕಡು ಬಡತನದಲ್ಲಿರುವವರಿಗೆ ದಿನನಿತ್ಯದ ಆಹಾರದ ಚಿಂತೆಯಾದರೆ, ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೊಡನೆಯೇ ಹೊರ ಪ್ರಪಂಚಕ್ಕೆ ಉತ್ತಮರಂತೆ ಕಾಣುವ ಅಭಿಲಾಷೆ ಮೂಡುತ್ತದೆ. ಇದಕ್ಕಾಗಿ ಸುಂದರವಾದ ಉಡುಪು, ಆಭರಣಗಳನ್ನು ಅಪೇಕ್ಷಿಸುತ್ತೇವೆ. ಇದಾದ ನಂತರ ಸ್ವಂತಕ್ಕೊ0ದು ಸೂರಿನ ಆಸೆ ಮೂಡುತ್ತದೆ. ಮನೆ ಕಟ್ಟಿಕೊಳ್ಳುವುದೆಂದರೆ ಕ್ಷಣ ಮಾತ್ರದ ನಿರ್ಧಾರವಲ್ಲ. ಜೀವಮಾನ ಕಾಲ ದೊರೆತ ಹಣ […]