ಹೆಚ್ಚು ನೀರು ಕುಡಿಸಿರಿ!

ನೀವು ಸಾಕುವ ಹಸು, ಎಮ್ಮೆ ಹೆಚ್ಚು ಹಾಲು ನೀಡಬೇಕಾದರೆ ಹೆಚ್ಚು ನೀರು ಕುಡಿಯಲೇಬೇಕು. ಏಕೆಂದರೆ ಹಾಲಿನಲ್ಲಿ ಶೇ.85 ರಷ್ಟು ನೀರೇ ಇರುತ್ತದೆ. ಇನ್ನು ಶೇ.15 ರಷ್ಟು ಉಳಿದ ಪೋಷಕಾಂಶಗಳಿರುತ್ತವೆ. ಉಳಿದ ಪೋಷಕಾಂಶಗಳಿಗಾಗಿ ಪಶು ಆಹಾರ ನೀಡುವುದರಿಂದ ಸರಿ ಹೊಂದುತ್ತದೆ. ರೈತರು ತಮ್ಮ ಜಾನುವಾರುಗಳಿಗೆ ಅವು ಕುಡಿಯುವಷ್ಟು ನೀರನ್ನು ಒದಗಿಸದಿದ್ದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ.
ನೀರು ಏಕೆ ಅವಶ್ಯಕ?
ಸಸಾರಜನಕ, ಕೊಬ್ಬು, ಶರ್ಕರಪಿಷ್ಟ, ಲವಣ ಮುಂತಾದ ಜೀವಸತ್ವಗಳಂತೆ ನೀರು ಕೂಡಾ ಪ್ರಮುಖವಾದ ಹಾಗೂ ಅಗತ್ಯವಾದ ಪೋಷಕಾಂಶ. ನೀರು ದೇಹದಲ್ಲಿನ ಹಲವಾರು ಶಾರೀರಿಕ ಕಾರ್ಯಗಳಿಗೆ ಅವಶ್ಯಕ. ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಲು, ದೇಹದ ಉಷ್ಣತೆ ಕಾಪಾಡಿಕೊಳ್ಳಲು, ಪಚನ ಕ್ರಿಯೆಗೆ, ಹೀರಿಕೊಂಡ ಪೋಷಕಾಂಶಗಳನ್ನು ದೇಹದ ಎಲ್ಲಾ ಭಾಗಗಳಿಗೆ ತೆಗೆದುಕೊಂಡು ಹೋಗಲು, ದೇಹದಲ್ಲಿ ನಡೆಯುವ ಹಲವಾರು ಜೈವಿಕ ರಾಸಾಯನಿಕ ಕ್ರಿಯೆಗಳಿಗೆ, ಈ ಕ್ರಿಯೆಗಳಿಂದ ಉತ್ಪನ್ನಗೊಂಡ ತ್ಯಾಜ್ಯ ವಸ್ತುಗಳನ್ನು ಗಂಜಲದ ಮೂಲಕ ವಿಸರ್ಜಿಸಲು ನೀರು ಅವಶ್ಯಕ. ಜಾನುವಾರುಗಳ ಬೆಳವಣಿಗೆ, ಸಂತಾನಾಭಿವೃದ್ಧಿ, ಹಾಲು ಉತ್ಪಾದನೆ ಮತ್ತು ಶುದ್ಧ ನೀರಿನ ಲಭ್ಯತೆ – ಸೇವನೆಯ ನಡುವೆ ಧನಾತ್ಮಕ ಸಂಬAಧವಿರುವ ಬಗ್ಗೆ ಹಲವಾರು ಸಂಶೋಧನೆಗಳಿAದ ಧೃಡಪಟ್ಟಿದೆ. ಅಲ್ಲದೆ ಕೀಲುಗಳ ಮೃದು ಚಾಲನೆಗೆ, ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಕೂಡಾ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಬೇರೆ ಯಾವುದೇ ಪೋಷಕಾಂಶಗಳಿಗಿAತಲೂ ನೀರಿನ ಕೊರತೆಯಿಂದ ಜಾನುವಾರುಗಳು ತುಂಬಾ ನರಳುತ್ತವೆ.
ಎಷ್ಟು ನೀರು ಕುಡಿಸಬೇಕು?
ಜಾನುವಾರುಗಳ ನೀರಿನ ಸೇವನೆ ಮುಖ್ಯವಾಗಿ ಆ ಪ್ರಾಣಿಯ ಗಾತ್ರ, ದೈಹಿಕ ಸ್ಥಿತಿ, ಆಹಾರ ಕ್ರಮ, ನೀರಿನ ಗುಣಮಟ್ಟ-ತಾಪಮಾನ, ಸುತ್ತಲಿನ ಪರಿಸರದ ತಾಪಮಾನಗಳ ಮೇಲೆ ಅವಲಂಬಿಸಿದೆ. ದಿನನಿತ್ಯ ನೀರಿನ ಸೇವನೆಯಲ್ಲಿ ಏರುಪೇರಾಗಲು ವಾತಾವರಣದಲ್ಲಿನ ಉಷ್ಣತೆ, ಆಹಾರದ ವಿಧ (ಗಟ್ಟಿ/ಮೆದು) ಸೇವಿಸಿದ ಆಹಾರದಲ್ಲಿನ ಉಪ್ಪಿನ ಪ್ರಮಾಣ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ಲೀಟರ್ ಹಾಲು ಉತ್ಪಾದನೆಗೆ ೪ ಲೀಟರ್ ನೀರು ಬೇಕು. ಜೊತೆಗೆ ಜಾನುವಾರಿನ ಇತರ ಅಗತ್ಯತೆಗಳಿಗೆ ದಿನವಹಿ 5-25 ಲೀಟರ್ ನೀರು ಬೇಕಾಗುತ್ತದೆ. ಪ್ರತಿ ಒಂದು ಕೆ.ಜಿ. ಆಹಾರ ಸೇವನೆಗೆ ಕನಿಷ್ಟ 4-6 ಲೀಟರ್‌ಗಳಷ್ಟು ನೀರನ್ನು ಹಸು/ಎಮ್ಮೆಗಳು ಕುಡಿಯುತ್ತವೆ. ಆದರೆ ಇದು ಅವುಗಳಲ್ಲಿರುವ ಒತ್ತಡ, ಅಲ್ಲಿನ ಹವಾಮಾನದೊಂದಿಗೆ ಬದಲಾಗುತ್ತದೆ. ಆದರೂ ನಮ್ಮ ರಾಜ್ಯದ ವಾತಾವರಣದಲ್ಲಿ ಪ್ರತಿ ದನಕ್ಕೆ ದಿನವೊಂದಕ್ಕೆ 75 ರಿಂದ 100 ಲೀ. ನೀರು ಬೇಕು. ಆದ್ದರಿಂದ ಹಸುಗಳಿಗೆ ಅವು ಕುಡಿಯುವಷ್ಟು ನೀರನ್ನು ದಿನಕ್ಕೆ3 ರಿಂದ 4 ಬಾರಿ ನೀಡುವುದು ಉತ್ತಮ. ಬಾಣಂತಿ ದನ/ಎಮ್ಮೆಗಳು ಇನ್ನೂ ಹೆಚ್ಚಿನ ನೀರು ಕುಡಿಯುತ್ತವೆ.
ನೀರು ಕಡಿಮೆ ಕುಡಿದರೆ
ನ್ನ ಪೂರ್ಣ ಅನುವಂಶಿಕ ಶಕ್ತಿಯನುಸಾರ ಹಾಲು ಕೊಡುವುದಿಲ್ಲ.

ಆಹಾರದ ಸೇವನೆ ಕಡಿಮೆಯಾಗುತ್ತದೆ.

ಮೆಲುಕು ಹಾಕುವಿಕೆಯಲ್ಲಿ ಇಳಿಕೆಯಾಗುತ್ತದೆ.

ಹೊಟ್ಟೆಯ ಚಲನತೆ ಕ್ಷೀಣಿಸಿ ಅಜೀರ್ಣತೆ ಕಾಣಬಹುದು.

ಗಂಜಲದ ಸಾಂದ್ರತೆ ಅತಿಯಾಗುವುದು, ಸೆಗಣಿ ಗಟ್ಟಿಯಾಗುವುದು, ಕಿಟೋಸಿಸ್‌ನಂತಹ ಹಲವಾರು ಕಾಯಿಲೆಗೂ ಕಾರಣವಾಗಬಹುದು.
ಗಮನಿಸಬೇಕಾದ ಅಂಶಗಳು
ಕರುಗಳ ಸಾವಿನ(ವಿಶೇಷವಾಗಿ ಎಮ್ಮೆ ಕರು) ಹಲವಾರು ಕಾರಣಗಳಲ್ಲಿ ಮಲಬದ್ಧತೆ ಕೂಡಾ ಒಂದು. ಹೆಚ್ಚು ನೀರು ಕುಡಿಸುವುದರಿಂದ ಮಲಬದ್ಧತೆಯ ಕಾರಣದಿಂದಾಗುವ ಸಾವನ್ನು ತಪ್ಪಿಸಬಹುದು.

ಕರುಗಳಿಗೆ ಉಗುರು ಬೆಚ್ಚಗಿನ ನೀರು ಕೊಡುವುದು ಉತ್ತಮ. ನೀರಿಗೆ ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಬೆರೆಸಿದರೆ ಉತ್ತಮ.

ಕೆಲ ಪ್ರದೇಶಗಳಲ್ಲಿ ಕರು ಹಾಕಿದ ನಂತರ ಕೆಲವು ದಿನಗಳವರೆಗೆ ತಾಯಿ ಹಸುವಿಗೆ ಶೀತವಾಗುತ್ತದೆ ಎಂಬ ಭಯದಿಂದ ನೀರು ಕೊಡುವುದೇ ಇಲ್ಲ. ಇದು ಶುದ್ಧ ತಪ್ಪುಗ್ರಹಿಕೆ. ಬದಲಿಗೆ ಕರು ಹಾಕಿದ ಕೂಡಲೇ ನಿಮ್ಮ ಜಾನುವಾರಿಗೆ ಶುದ್ಧ ನೀರನ್ನು (ಬಿಸಿ ಮಾಡುವ ಅಗತ್ಯವಿಲ್ಲ), ಬೇಕಾದರೆ ಸ್ವಲ್ಪ ಉಪ್ಪು, ಸ್ವಲ್ಪ ಪಶು ಆಹಾರ ಹಾಕಿ ಕುಡಿಸಿರಿ.

ಇನ್ನು ಕೆಲ ಪ್ರದೇಶಗಳಲ್ಲಿ ಕರು ಹಾಕಿದ ನಂತರ ಕಸ ಬೀಳುವವರೆಗೆ ನೀರು ಕೊಡುವುದಿಲ್ಲ. ಇದು ಕೂಡಾ ತಪ್ಪುಗ್ರಹಿಕೆ, ಮೂಢನಂಬಿಕೆ.

ಕೆಲ ರೈತರು ಪಶು ಆಹಾರವನ್ನು ನೀರು ಮಾಡಿ ಕುಡಿಸುತ್ತಾರೆ. ಇದರಿಂದ ಹೆಚ್ಚೇನು ಪ್ರಯೋಜನವಿಲ್ಲ. ಟಿ ಸದಾಕಾಲ ಜಾನುವಾರುಗಳಿಗೆ ದೊರಕುವಂತೆ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದರೆ ಸ್ವಲ್ಪ ಉಪ್ಪು ಮಿಶ್ರಿತ ನೀರು ಕುಡಿಸಬಹುದು ಅಥವಾ ರುಚಿಗೆ ತಕ್ಕಂತೆ ಸ್ವಲ್ಪ ಪಶು ಆಹಾರ/ಹಿಂಡಿಯನ್ನು ಬೆರೆಸಬಹುದು.’

ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *