ಸಂಯಮ ಸಾಧನೆಗೆ ಶಿವರಾತ್ರಿ ಸ್ಫೂರ್ತಿ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮಹಾಶಿವನ ಮಂಗಳಕರ ಶಿವರಾತ್ರಿಯನ್ನು ಪ್ರತಿವರ್ಷ ಭಕ್ತಿಪೂರ್ವಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಲಾಗುತ್ತದೆ. ನಾಡಿನ ವಿವಿಧ ಕಡೆಗಳಿಂದ ಬಹಳಷ್ಟು ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಂದು ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಮಾಡಿ ರಥೋತ್ಸವವನ್ನು ಕಣ್ತುಂಬಿಕೊಂಡು ಶ್ರೀಸ್ವಾಮಿಯ ದರ್ಶನವನ್ನು ಮಾಡುತ್ತಾರೆ. ಕೈಕಾಲು ನೋವು, ಸುಸ್ತನ್ನು ಲೆಕ್ಕಿಸದೆ ಶ್ರೀಕ್ಷೇತ್ರವನ್ನು ತಲುಪಬೇಕು, ಸ್ವಾಮಿಯನ್ನು ಕಾಣಬೇಕೆಂಬ ಭಕ್ತಿ, ಏಕಾಗ್ರತೆ, ಗುರಿಯೊಂದಿಗೆ ಉತ್ಸಾಹಭರಿತವಾಗಿ ಗಾಳಿಯೇ ತಳ್ಳಿಕೊಂಡು ಬಂದ ರೀತಿಯಲ್ಲಿ ಭಕ್ತರು ಏಳೆಂಟು ದಿನಗಳ ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಆಗಮಿಸುತ್ತಾರೆ.ಈ ದೇಹವೆಂಬುವುದು ಒಂದು […]

ಮಹಿಳಾ ಸಬಲೀಕರಣ – ಯಾರ ಹೊಣೆ?

ಡಾ| ಎಲ್.ಎಚ್. ಮಂಜುನಾಥ್ ಪುರುಷ ಪ್ರಧಾನ ಸಂಸ್ಕøತಿಗಳೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರಕಿಸಿಕೊಡಬೇಕೆಂಬ ಪ್ರಯತ್ನ ಮಾಡಿದವರೆಷ್ಟೋ ಮಹಾಮಹಿಮರು ಆಗಿ ಹೋಗಿದ್ದಾರೆ. ಸತಿಸಹಗಮನ ಪದ್ಧತಿಯನ್ನು ರದ್ದುಗೊಳಿಸುವಲ್ಲಿ ಶ್ರಮಿಸಿದ ರಾಜಾರಾಮ್ ಮೋಹನ್‍ರಾಯ್‍ರಿಂದ ಪ್ರಾರಂಭಿಸಿ ಬಾಲಕಿಯರಿಗೆ ಶಿಕ್ಷಣ ಒದಗಿಸುವ ಕುರಿತು ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆವರೆಗೆ ನಮ್ಮ ದೇಶ ಅನೇಕ ಮಹಿಳಾ ಸಬಲೀಕರಣದ ಅಧ್ವರ್ಯಗಳನ್ನು ಕಂಡಿದೆ. ಅವರುಗಳು ಅನುಸರಿಸಿದ ದಾರಿಗಳೂ ಅಷ್ಟೇ ವೈಶಿಷ್ಟ್ಯಪೂರ್ಣವಾಗಿವೆ.ಮಹಿಳಾ ಸಬಲೀಕರಣ ಎನ್ನುವ ಪದಪುಂಜವನ್ನು ಇತ್ತೀಚಿನ ದಿನಗಳಲ್ಲಿ ನಾವು ಬಹಳಷ್ಟು ಕೇಳುತ್ತಿದ್ದೇವೆ. ಸಬಲೀಕರಣವೆಂದರೆ ಕುಟುಂಬದಲ್ಲಿ […]

ಸ್ವಾವಲಂಬನೆಗಾಗಿ ಸುಸ್ಥಿರತೆಯ ಸ್ವಸಹಾಯ ಸಂಘಗಳು

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್. ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಜನರ ಜೀವನದಲ್ಲಿ ಹೇಗೆಲ್ಲಾ ಪರಿವರ್ತನೆಗಳು ‘ಸ್ವಸಹಾಯ ಸಂಘ’ಗಳ ಮೂಲಕ ಉಂಟಾಗಿದೆ ಎಂದು ವಿವರಿಸಬೇಕಾಗಿದೆ. ಸ್ವಸಹಾಯ ಚಿಂತನೆಯ ತತ್ವದ ಅಡಿಯಲ್ಲಿ ಹತ್ತಾರು ಕೈಗಳು ಒಟ್ಟಿಗೆ ಸೇರಿ, ಸಮೂಹ ಶಕ್ತಿಯಾಗಿ ಪರಸ್ಪರ ಅಭಿವೃದ್ಧಿ ಹೊಂದುವ ಉದ್ದೇಶಕ್ಕಾಗಿ ಸ್ವಸಹಾಯ ಸಂಘದ ಚಳುವಳಿಗೆ ಪೂಜ್ಯ ಶ್ರೀ ಹೆಗ್ಗಡೆಯವರು ಚಾಲನೆಯಿತ್ತರು. 5 ರಿಂದ 10 ಸದಸ್ಯರಿರುವ ರೈತಾಪಿ ವರ್ಗದ ಜನರನ್ನು ಸೇರಿಸಿ ‘ಪ್ರಗತಿಬಂಧು ಸಂಘ’ಗಳಾಗಿ ಹಾಗೂ 10 […]

ಸಕಲ ಗುಣಗಳ ಆದರ್ಶ ಪುರುಷ ಶ್ರೀರಾಮ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ರಾಮ’ನನ್ನು ದೇವರಾಗಿ ಭಕ್ತಿಯಿಂದ ಪೂಜಿಸುವ ಒಂದು ವರ್ಗವಾದರೆ ಆತನ ಆದರ್ಶಗಳಿಗಾಗಿ, ಆತನ ಗುಣಗಳಿಗೆ ಆತನನ್ನು ಮೆಚ್ಚುವ ಇನ್ನೊಂದು ವರ್ಗವೇ ಇದೆ. ಕಷ್ಟಗಳಿಗೆ ಯಾವತ್ತೂ ಅಂಜದವ, ಪಿತೃವಾಕ್ಯ ಪರಿಪಾಲಕ, ಕುಟುಂಬ ವತ್ಸಲಿ ಮತ್ತು ಏಕಪತ್ನಿವೃತಸ್ತ ಹೀಗೆ ರಾಮ ಗುಣಗಳ ಗಣಿ. ರಾಮ ಹುಟ್ಟಿ7000 ವರ್ಷಗಳಾದರೂ ಇನ್ನು ಜನಮಾನಸದಲ್ಲಿ ನೆಲೆನಿಂತಿರುವುದಕ್ಕೆ ಕಾರಣ ಆತ ಯಾವುದೇ ಸಂದರ್ಭದಲ್ಲಿ ತನ್ನ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳದಿರುವುದೇ ಆಗಿದೆ. ದಶರಥ ಶ್ರೀರಾಮನಿಗೆ ಪಟ್ಟಾಭೀಷೇಕನಾಗುವಂತೆ ಹೇಳಿದಾಗ ಮತ್ತು ವನವಾಸಕ್ಕೆ ತೆರಳಲು ಹೇಳಿದಾಗ […]

ಧರ್ಮಸ್ಥಳದ ಮೇಲಿನ ನಂಬಿಕೆ ಬಡವರ ಬಾಳಿಗೆ ಬೆಳಕಾಯಿತು

ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ ಹಿಂದಿನ ಸಂಚಿಕೆಯಲ್ಲಿ ಸಿರಿವಂತರ ಬಳಿ ಸಾಲ ಪಡೆಯಲು ಬ್ಯಾಂಕಿಗೆ ನೀಡಬೇಕಾದ ದಾಖಲೆ, ಸ್ಥಿರಾಸ್ತಿ, ಜಾಮೀನು ಎಲ್ಲಾ ಇದೆ. ಆದರೆ ಅವರಿಗೆ ಸಾಮಾನ್ಯವಾಗಿ ಸಾಲ ಬೇಡ. ಆದರೆ ಬಡವರಿಗೆ ಸಾಲ ಬೇಕು, ಆದರೇನು ಮಾಡುವುದು ಸಾಲಕ್ಕಾಗಿ ಬ್ಯಾಂಕಿಗೆ ಕೊಡಲು ದಾಖಲೆ, ಸ್ಥಿರಾಸ್ತಿ, ಜಾಮೀನುಗಳು ಮಾತ್ರ ಇಲ್ಲ. ಹೀಗಿರುವಾಗ ಯಾವ ಮಹಾನ್ ಶಕ್ತಿ ಈ ಬಡವರ ಬೆನ್ನಿಗೆ ನಿಲ್ಲಲು ಸಾಧ್ಯ ಎಂದು ವಿವರಿಸಿದ್ದೆ. ಬ್ಯಾಂಕ್‌ಗಳು ಸಾಲಕ್ಕಾಗಿ ಪಡೆಯುವ ಈ ದಾಖಲೆಗಳು, ಸ್ಥಿರಾಸ್ತಿ, ಜಾಮೀನುಗಳೆಲ್ಲವೂ […]

ಸಣ್ಣ ಪುಟ್ಟ ಬದಲಾವಣೆಯಲ್ಲಿ ಖುಷಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಅನೇಕರಿಗೆ ಜೀವನದಲ್ಲಿ ಅಲ್ಪ – ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಲು ಮನಸ್ಸಿರುವುದಿಲ್ಲ. ನಾವಿರುವುದೇ ಹೀಗೆ ಎಂದು ಅಂದುಕೊoಡಿರುತ್ತಾರೆ. ಆದರೆ ಈ ಅಲ್ಪಸ್ವಲ್ಪ ಬದಲಾವಣೆಗಳಿಂದಲೇ ನಮ್ಮ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ ಎಂಬುದನ್ನು ಗಮನಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಹೊದಿಕೆ ಮಡಚಿಡುವುದು, ಸ್ನಾನದ ಬಳಿಕ ಒರೆಸಿದ ಒದ್ದೆ ಬಟ್ಟೆಯನ್ನು ಒಣಗಲು ಹಾಕುವುದು, ಕಾಫಿ – ನೀರು ಕುಡಿದ ಲೋಟವನ್ನು ತಕ್ಷಣ ತೊಳೆದಿಡುವುದು. ಒಗೆದ ಬಟ್ಟೆಯನ್ನು ಸರಿಯಾಗಿ ಇಡುವುದು, ಇಸ್ತಿç ಮಾಡಿಟ್ಟ ಬಟ್ಟೆಯನ್ನು ಜೋಡಿಸಿಡುವುದು, ಓದಿದ […]