ಡಾ| ಎಲ್. ಎಚ್. ಮಂಜುನಾಥ್
ನಮ್ಮ ದೇಶಕ್ಕೆ ಸ್ವಾತಂತ್ರö್ಯ ಕೊಡಿಸಿದ ಹಿರಿಯರು ಪ್ರಜೆಗಳಲ್ಲಿಯೇ ಸರಕಾರ ನಿರ್ವಹಣೆಯ ಅಧಿಕಾರ ಇರಬೇಕೆಂಬ ಕಲ್ಪನೆಯೊಂದಿಗೆ ಪ್ರಜಾಪ್ರಭುತ್ವ ಮಾದರಿಯನ್ನು ಅಂಗೀಕರಿಸಿದರು. ಸ್ವಾತಂತ್ರö್ಯ ನಂತರದ 76 ವರ್ಷಗಳಲ್ಲಿ ಅನೇಕ ಸವಾಲುಗಳ ಹೊರತಾಗಿಯೂ ಈ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿ ಬೆಳೆದು ನಿಂತಿದೆ ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿ ಮೂಡಿಬಂದಿದೆ.
ನಮ್ಮ ದೇಶದಲ್ಲಿ ಲೋಕಸಭೆಗೆ, ವಿಧಾನಸಭೆಗೆ ಚುನಾವಣೆಗಳು ಆಗುತ್ತವೆ. ಜೊತೆಗೆ ಗ್ರಾಮ ಪಂಚಾಯತ್‌ಗಳಿಗೆ ಪ್ರತ್ಯೇಕ ಚುನಾವಣೆಗಳು ನಡೆಯುತ್ತವೆ. ಕೆಲವು ರಾಜ್ಯಗಳಲ್ಲಿ ಮಧ್ಯಮ ಸ್ಥರದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳ ಪರಿಕಲ್ಪನೆಯಿದ್ದು ಅವುಗಳಿಗೂ ಪ್ರತ್ಯೇಕವಾದ ಚುನಾವಣೆ ಆಗುತ್ತದೆ. ನಗರಸಭೆ, ಪುರಸಭೆ ಮತ್ತು ಕಾರ್ಪೋರೇಶನ್ ಇರುವಲ್ಲೆಲ್ಲಾ ಪ್ರತ್ಯೇಕ ಚುನಾವಣೆಗಳು ಅದಕ್ಕೂ ಆಗುತ್ತದೆ. ಇದಲ್ಲದೆ ಸಹಕಾರಿ ಚಳುವಳಿಯೂ ಬಹಳ ಪ್ರಬಲವಾಗಿದ್ದು ಅವುಗಳಿಗೂ ಚುನಾವಣೆ ನಡೆಯುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರಜಾಪ್ರಭುತ್ವವನ್ನು ಎಲ್ಲ ಹಂತಗಳಲ್ಲಿಯೂ, ಎಲ್ಲ ಸ್ಥರಗಳಲ್ಲಿಯೂ ಯಶಸ್ವಿಗೊಳಿಸಿದ ರಾಷ್ಟç ಎಂದು ಹೇಳಬಹುದಾಗಿದೆ.
ಪಕ್ಷಗಳು, ಅಭ್ಯರ್ಥಿಗಳು ಜನರನ್ನು ಸಂಪರ್ಕಿಸಿ ತಮ್ಮ ಗುಣಗಾನವನ್ನು ಮಾಡಿಕೊಂಡು ತಮಗೆ ಮತವನ್ನು ಚಲಾಯಿಸಬೇಕೆಂಬ ಪ್ರಾರ್ಥನೆ ಮಾಡುವುದು ಚುನಾವಣಾ ಪೂರ್ವದಲ್ಲಿ ನಡೆಯುವ ಬಹಳ ದೊಡ್ಡ ಪ್ರಕ್ರಿಯೆ. ಕಾಲದಿಂದ ಕಾಲಕ್ಕೆ ಚುನಾವಣಾ ಪ್ರಚಾರದಲ್ಲಿ ಚುನಾವಣಾ ಆಯೋಗವು ಸಾಕಷ್ಟು ಬದಲಾವಣೆಗಳನ್ನು ತಂದಿದ್ದು ಹಿಂದಿನoತೆ ಅಡ್ಡಾದಿಡ್ಡಿಯಾಗಿ ಪ್ರಚಾರ ಮಾಡುವಂತಿಲ್ಲ, ಅಲ್ಲಲ್ಲಿ ಬ್ಯಾನರ್ ಪೋಸ್ಟರ್‌ಗಳನ್ನು ಹಾಕಿ ಗ್ರಾಮದ ಅಂದಗೆಡಿಸುವoತಿಲ,್ಲ ಮನೆ ಮನೆ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ. ಸಾರ್ವಜನಿಕ ಸಭೆಯಾಗುತ್ತಿದ್ದರೆ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕೆಂಬ ಆದೇಶ. ಜೊತೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಆದೇಶಗಳನ್ನು ಚುನಾವಣಾ ಆಯೋಗವು ನೀಡಿರುತ್ತದೆ. ದೇಶದಲ್ಲಿ ಯಾವುದೇ ಚುನಾವಣೆಯನ್ನು ನಡೆಸುವುದಿದ್ದರೂ ಅದನ್ನು ಇದಕ್ಕಾಗಿಯೇ ಸ್ಥಾಪಿಸಲ್ಪಟ್ಟಿರುವ ‘ಚುನಾವಣಾ ಆಯೋಗ’ವು ನಿರ್ಧರಿಸುತ್ತದೆ. ಹಾಗಾಗಿ ಚುನಾವಣೆ ಘೋಷಣೆಯಾದ ನಂತರ ಇಡೀ ದೇಶದ ಒಟ್ಟು ನಿರ್ವಹಣೆಯನ್ನು ಚುನಾವಣಾ ಆಯೋಗವೇ ವಹಿಸಿಕೊಳ್ಳುವುದು ನಮ್ಮ ದೇಶದ ವೈಶಿಷ್ಟö್ಯವಾಗಿದೆ. ಜನರನ್ನು ಮೆಚ್ಚಿಸಲು ಅವರಿಗೆ ಆಮೀಶ ತೋರಿಸಲು ವಸ್ತುಗಳನ್ನು ನೀಡುವುದು, ಹಣವನ್ನು ಹಂಚುವುದು ಇಂತವುಗಳನ್ನು ಕಟ್ಟುನಿಟ್ಟಾಗಿ ಚುನಾವಣಾ ಆಯೋಗವು ನಿಷೇಧಿಸಿದೆ. ಮಾತ್ರವಲ್ಲದೆ ಇಂತಹ ಪ್ರಕ್ರಿಯೆಗಳು ನಡೆಯಬಾರದೆಂಬ ಹಿನ್ನೆಲೆಯಲ್ಲಿ ದೇಶದುದ್ದಕ್ಕೂ ಎಲ್ಲ ಕಡೆಯೂ ಚುನಾವಣಾ ಆಯೋಗವು ಕಟ್ಟುನಿಟ್ಟಿನ ತಪಾಸಣೆಯನ್ನು ಒಳಪಡಿಸುತ್ತದೆ. ಚುನಾವಣಾ ಆಯೋಗಕ್ಕೆ ಹೆಚ್ಚಿನ ಹಕ್ಕು ಈ ಸಂದರ್ಭದಲ್ಲಿ ಬರುತ್ತದೆ. ಚುನಾವಣಾ ಆಯೋಗವು ಪ್ರತಿ ಜಿಲ್ಲೆಯಲ್ಲಿರುವ ಜಿಲ್ಲಾಧಿಕಾರಿಗಳ ಮುಖಾಂತರ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ.
ನಮ್ಮ ರಾಷ್ಟçದಲ್ಲಿ ನಡೆಯುವ ಚುನಾವಣೆಗಳು ಪಾರದರ್ಶಕವಾಗಿಯೂ, ಜನರು ಮೆಚ್ಚುವಂತೆಯೂ ಮತ್ತು ಎಲ್ಲರೂ ಒಪ್ಪುವಂತೆಯೂ ನಡೆಯುತ್ತಿದೆ ಎಂಬುವುದು ಅತ್ಯಂತ ಸಂತೋಷದ ಮತ್ತು ಹೆಮ್ಮೆಯ ವಿಚಾರವಾಗಿದೆ. ನಮ್ಮ ಪ್ರಜೆಗಳು ನೋಡಲು ಅವಿದ್ಯಾವಂತರAತೆ, ಬಡವರಂತೆ ಕಂಡರೂ ಅವರು ತಮಗೆ ಬೇಕಾದಂತಹ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ನಮ್ಮ ದೇಶದ ಜನರು ಅತ್ಯಂತ ಹೆಚ್ಚಿನ ಬುದ್ದಿವಂತಿಕೆಯನ್ನು, ಪ್ರಬುದ್ಧತೆಯನ್ನು ತೋರಿಸುತ್ತಿದ್ದಾರೆ. ಕೆಲವು ಕಡೆ ಮತದಾರರು ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತ ಪಕ್ಷವನ್ನು ಬದಲಾಯಿಸುತ್ತಾರೆ. ಇನ್ನು ಕೆಲವೆಡೆ ಹಲವಾರು ವರ್ಷಗಳ ಕಾಲ ಅದೇ ಆಡಳಿತವನ್ನು ಮತ್ತೆ ಆಯ್ಕೆ ಮಾಡುವ ಪ್ರಬುದ್ಧತೆಯನ್ನೂ ಕೂಡಾ ಮತದಾರರು ತೋರಿಸುತ್ತಾರೆ.
ಏನೇ ಇರಲಿ, ನಮ್ಮ ದೇಶದಲ್ಲಿ ಮತದಾರರು ಜಾಗೃತರಾಗಿದ್ದಾರೆ. ಚುನಾವಣಾ ಆಯೋಗವು ನೇರ, ನಿಷ್ಠುರವಾಗಿ ಕೆಲಸ ಮಾಡುತ್ತಿದೆ. ಮತ್ತು ರಾಜಕೀಯ ಪಕ್ಷಗಳೂ ಪ್ರಬುದ್ಧತೆಯಿಂದ ದೇಶಕ್ಕೆ ಮತ್ತು ರಾಜ್ಯಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಅನೇಕ ಸವಾಲುಗಳ ಹೊರತಾಗಿಯೂ ಪ್ರಯತ್ನ ಮಾಡುತ್ತಿವೆ.
ಇದೀಗ ಮತ್ತೊಮ್ಮೆ ರಾಷ್ಟಿçÃಯ ಚುನಾವಣೆ ಎದುರು ಬಂದು ನಿಂತಿದೆ. ಎರಡು ಪ್ರಮಖ ಪಕ್ಷಗಳ ಒಕ್ಕೂಟಗಳು ಈ ಚುನಾವಣೆಯನ್ನು ಎದುರಿಸುತ್ತಿವೆ. ಈ ಸಂದರ್ಭದಲ್ಲಿ ಸರಿಯಾದ ಪಕ್ಷವನ್ನು ಆಯ್ಕೆ ಮಾಡಿ ಅವರಿಗೆ ಆಡಳಿತವನ್ನು ನೀಡುವಂತಹ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ. ಕ್ಷಣಕಾಲದ ಆಮಿಷಗಳಿಗೆ ಬಲಿಯಾಗದೆ ರಾಷ್ಟç ನಿರ್ಮಾಣ, ಪ್ರಜೆಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ವ್ಯಕ್ತಿಯನ್ನು, ಸರಿಯಾದ ಪಕ್ಷವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದು ಆಗಿದೆ. ಪ್ರಲೋಭನೆಯನ್ನು ನಾವು ತಿರಸ್ಕರಿಸೋಣ. ಏಕೆಂದರೆ ಚುನಾವಣಾ ಆಯೋಗದ ನೀತಿ ನಿಯಮದಂತೆ ಪ್ರಲೋಭನೆಯನ್ನು ಸ್ವೀಕರಿಸುವುದು ಕೂಡಾ ಅಪರಾಧ. ಇನ್ನು ಅನೇಕರು ಮತದಾನದ ದಿನದಂದು ಸೋಮಾರಿತನದಿಂದ ಅಥವಾ ನಕಾರಾತ್ಮಕ ಭಾವನೆಗಳಿಂದ ಮತ ಚಲಾಯಿಸುವುದಿಲ್ಲ. ಮತದಾನ ನಮ್ಮ ಪವಿತ್ರ ಕರ್ತವ್ಯ. ಮತವನ್ನು ಚಲಾಯಿಸುವುದು ನಮ್ಮ ಹಕ್ಕು. ನಮಗೆ ಬೇಕಾದ ಆಡಳಿತವನ್ನು ಚುನಾಯಿಸುವುದು ನಮ್ಮ ಅಧಿಕಾರ ಮತ್ತು ಮತವನ್ನು ಸರಿಯಾದ ವ್ಯಕ್ತಿಗೆ ಚಲಾಯಿಸುವುದು ನಮ್ಮ ಬಾಧ್ಯತೆಯೂ ಆಗಿದೆ. ಆದುದರಿಂದ ಇದೊಂದು ವೈಶಿಷ್ಟö್ಯಪೂರ್ಣವಾಗಿರುವ ಅವಕಾಶ. ನಮ್ಮ ಅಧಿಕಾರ ಮತ್ತು ಹಕ್ಕನ್ನು ಬಾಧ್ಯತೆ ಎಂದು ಪರಿಗಣಿಸಿ ಮತ ಚಲಾಯಿಸಿ ನಮ್ಮ ಮತ್ತು ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾವು ನಾಂದಿ ಹಾಡೋಣ.
ಎಲ್ಲರೂ ಮತ ಚಲಾಯಿಸುತ್ತಿರಲ್ಲವೇ? ಶುಭವಾಗಲಿ… ಉತ್ತಮ ಪಕ್ಷಕ್ಕೆ ಗೆಲುವಾಗಲಿ…