ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಚಂದ್ರಹಾಸ್‌ ಚಾರ್ಮಾಡಿಯವರಿಗೆ ಪ್ರಥಮ ಸ್ಥಾನ

ಬ್ಲಾಕ್ ಬಾಕ್ಸ್ ಸ್ಟುಡಿಯೋ ಆಯೋಜಿಸಿದ ಆನ್‌ಲೈನ್ ಫೋಟೊಗ್ರಾಫಿ ಸ್ಪರ್ಧೆಯಲ್ಲಿ ‘ನಿರಂತರ’ ಪತ್ರಿಕೆಯ ಸಂಪಾದಕರಾದ ಡಾ. ಚಂದ್ರಹಾಸ್ ಚಾರ್ಮಾಡಿಯವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಇವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಕನ್ನಡದಲ್ಲಿ ಎಂ.ಎ., ಹಂಪಿ ವಿಶ್ವವಿದ್ಯಾನಿಲಯದಡಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಸುಮಾರು ಎರಡು ಸಾವಿರದಷ್ಟು ಬರಹಗಳು ರಾಜ್ಯದ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರ ನೂರೊಂದು ಕಥೆಗಳು’, ‘ನುಡಿಚಿತ್ರ’, ‘ಕೆರೆಯ ಕಥೆಗಳು’, ‘ಅಂಗಡಿ ಮಜಲು’, ‘ಹುಡುಕಾಟ’ ಮುಂತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಈಗಾಗಲೇ ಪತ್ರಕರ್ತರಿಗೆ ಕೊಡಲ್ಪಡುವ ಪ.ಗೋ. ಪ್ರಶಸ್ತಿ, ಸೌರಭ ರಾಜ್ಯ ಪ್ರಶಸ್ತಿ, ಅತ್ಯುತ್ತಮ ಬರಹಗಾರ, ಕೆಯುಡಬ್ಲ್ಯೂಜೆ ಪ್ರಶಸ್ತಿಗಳು ದೊರೆತಿವೆ. ಪತ್ರಿಕೆಯ ಸಂಪಾದಕೀಯ ಮಂಡಳಿಯ ಪರವಾಗಿ ಅಭಿವಂದನೆಗಳು.

Facebook
Twitter
WhatsApp
LinkedIn
Telegram