ನಾಳಿನ ಭವಿಷ್ಯ ನಿಂತಿದೆ ಇಂದಿನ ವರ್ತಮಾನದಲ್ಲಿ

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಪೂಜ್ಯ ಶ್ರೀ ಹೆಗ್ಗಡೆಯವರು ಮೊನ್ನೆ ರಾಜ್ಯಸಭೆಯಲ್ಲಿ ಅಭಿವಂದನಾ ಭಾಷಣದಲ್ಲಿ ಅನೇಕ ಅತ್ಯುತ್ತಮ ವಿಚಾರಗಳನ್ನು ಮಂಡಿಸಿದರು. ವರ್ತಮಾನ ಕಾಲ ಹಾಗೂ ಭೂತಕಾಲದ ನಡುವಿನ ಸಂಬoಧವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿದರು. ವರ್ತಮಾನದಲ್ಲಿ ಅಂದರೆ ಈ ದಿನ ನಾವು ಯಾವ ಕಾರ್ಯಗಳನ್ನು ಮಾಡುತ್ತೇವೂ ಅದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆಯೇ ಹೊರತು ಗತಕಾಲದ ಕಾರ್ಯಗಳು ಅಲ್ಲ ಎನ್ನುವ ನೈಜತೆಯನ್ನು ದೇಶಕ್ಕೆ ತಿಳಿಸಿದರು. ಗತಕಾಲ ಅಥವಾ ಭೂತಕಾಲದ ಎಲ್ಲಾ ಘಟನಾವಳಿಗಳಿಂದ ನಾವು ಪಾಠವನ್ನು ಕಲಿತು ವರ್ತಮಾನದಲ್ಲಿ ಅತ್ಯುತ್ತ್ತಮ ಕಾರ್ಯಗಳನ್ನು […]

‘ಹಿತ್ತಲ ಗಿಡ ಮದ್ದಲ್ಲ’ ಆದರೆ ಅಲ್ಲಿ ‘ತರಕಾರಿ’ಬೆಳೆಯಬಹುದಲ್ಲವೇ?

ಶ್ರೀ ಅನಿಲ್ ಕುಮಾರ್ ಎಸ್.ಎಸ್. ರಾಮಣ್ಣ ಕೆಲಸ ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿರುವಾಗ ಹೆಂಡತಿ ತರಕಾರಿ ತರಲು ಹೇಳಿದ್ದು ನೆನಪಾಯಿತು. ಮೂರು ನಾಲ್ಕು ದಿನಕ್ಕಾಗುವಷ್ಟು ಇರಲಿ ಎಂದು ಕೆಲವು ತರಕಾರಿಗಳನ್ನು ಸ್ವಲ್ಪ, ಸ್ವಲ್ಪ ತೆಗೆದುಕೊಂಡರು. ಅಂಗಡಿಯ ಭೀಮಣ್ಣ ರೂ. 280 ಎಂದು ಚೀಟಿಯನ್ನು ಕೊಟ್ಟರು. ಹುಬ್ಬೇರಿಸಿದ ರಾಮಣ್ಣ ತರಕಾರಿಯ ಬೆಲೆ ಗಗನಕ್ಕೇರಿದೆ ಎಂದು ಗೊಣವಿಗೊಂಡನು. ರಾಮಣ್ಣನ ಮಾತಿನ ಒರಸೆ ಅರ್ಥ ಮಾಡಿಕೊಂಡ ಭೀಮಣ್ಣ, ತರಕಾರಿ ಬೆಲೆಯನ್ನು ಸಮರ್ಥಿಸಿಕೊಳ್ಳಲು ಶುರು ಮಾಡಿದ. ಒಂದೊoದು ತರಕಾರಿಯ ಹೆಸರಿನೊಂದಿಗೆ ಅವುಗಳನ್ನು ಪೂರೈಕೆ […]

ಕಳವಾದ ಮೊಬೈಲ್‌ಗೆ
ಲಾಕ್ ಮಾಡಿ

ಇನ್ಮುಂದೆ ನಿಮ್ಮ ಮೊಬೈಲ್ ಕಳವಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಳವಾದ ಫೋನನ್ನು ಕೂತಲ್ಲಿಯೇ ಪೊಲೀಸ್ ಅಥವಾ ವಾರಸುದಾರರು ಬಳಕೆ ಆಗದಂತೆ ಲಾಕ್ ಮಾಡುವ ಸೌಲಭ್ಯವನ್ನು ರಾಜ್ಯ ಪೊಲೀಸ್ ಇಲಾಖೆ ಒದಗಿಸುತ್ತಿದೆ.ಈಗಾಗಲೆ ಎಲ್ಲ ಮೊಬೈಲ್ ಕಂಪೆನಿ ಮತ್ತು ಟೆಲಿಕಾಂ ಕಂಪೆನಿಗಳೊoದಿಗೆ ಮೊಬೈಲ್ ಬ್ಲಾಕಿಂಗ್ ಬಗ್ಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ.ಮೊಬೈಲ್ ಕಳವಾದರೆ ನಾವೇನು ಮಾಡಬೇಕು?ಮೊಬೈಲ್ ಕಳವಾದ ಬಗ್ಗೆ ಪೊಲೀಸ್ ಇಲಾಖೆಯ ‘ಇ – ಲಾಸ್ಟ್’ನಲ್ಲಿ ದೂರು ದಾಖಲಿಸಬೇಕು. ‘ಇ – ಲಾಸ್ಟ್’ನಲ್ಲಿ […]

ಏನಿದು ಜಿ.ಐ. ಟ್ಯಾಗ್

ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಜಿ.ಐ. ಟ್ಯಾಗ್ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವ ಘೋಷಣೆ ಮಾಡಿರುವುದು ರಾಜ್ಯದ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ‘ಒಂದು ಜಿಲ್ಲೆ ಒಂದು ಉತ್ಪನ್ನ’ ಹಾಗೂ ಜಿ.ಐ. ಟ್ಯಾಗ್ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರಕಾರಕ್ಕೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ‘ಅಮೃತಕಾಲ’ದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.ಜಿ.ಐ. ಟ್ಯಾಗ್ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಎಂದರ್ಥ. ಒಂದು ಉತ್ಪನ್ನದ ಭೌಗೊಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿ.ಐ. […]