ಬಡತನ ನೀಗಿಸಿದ ಚಕ್ಕುಲಿ ವ್ಯಾಪಾರ

ಚೆಲುವಮ್ಮ ಮೂಲತಃ ತಮಿಳುನಾಡಿನವರು. ಬಡತನದಲ್ಲೆ ಬೆಳೆದವರು. ತಂದೆ – ತಾಯಿ ಕೂಲಿ ಕೆಲಸಕ್ಕೆ ಹೋಗಿ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಮನೆಮಂದಿಯ ಹೊಟ್ಟೆ ತುಂಬಿಸುವುದೇ ಸವಾಲಾಗಿದ್ದರಿಂದ ಚೆಲುವಮ್ಮನೂ ಶಾಲೆಗೆ ಹೋಗದೆ ಮನೆಯ ಕೆಲಸಗಳನ್ನು ನೋಡಿಕೊಂಡಿರುತ್ತಿದ್ದರು.ವಿವಾಹದ ನಂತರ ಕೆಲವು ವರ್ಷಗಳ ಹಿಂದೆ ಚೆಲುವಮ್ಮ ದಂಪತಿಗಳು ತಿ. ನರಸೀಪುರಕ್ಕೆ ವಲಸೆ ಬಂದರು. ಗಂಡ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಬಡತನ ಇವರ ಬೆನ್ನುಬಿಡಲಿಲ್ಲ. ಕೂಲಿ ಕೆಲಸದಿಂದ ಸಿಗುತ್ತಿದ್ದ ಆದಾಯ ಕುಟುಂಬ ನಿರ್ವಹಣೆಗೆ ಸಾಲದಾಯಿತು. ತಾನು ಯಾವುದಾದರೂ ಸ್ವಉದ್ಯೋಗ ಮಾಡಿ ಆದಾಯ […]

ಹಾಲು ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತಿದೆಯೇ?

ಹೈನುಗಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಲ್ಲಿ ಹಾಲು ಉತ್ಪಾದನೆಯಲ್ಲಿನ ವ್ಯತ್ಯಯ ಕೂಡಾ ಬಹುಮುಖ್ಯವಾದುದು.ಕಾರಣ ಮತ್ತು ಪರಿಹಾರಆಹಾರ : ದಿನನಿತ್ಯ ಪಶು ಆಹಾರ ಕೊಡುವ ಪ್ರಮಾಣ ಅಥವಾ ಸಮಯದಲ್ಲಿ ವ್ಯತ್ಯಾಸವಾದರೂ ಕೂಡಾ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭದ ಅವಧಿಯಲ್ಲಿ ಆರೈಕೆ ಸರಿಯಾಗದಿದ್ದರೆ, ಆಹಾರದ ಕೊರತೆಯಾದರೆ, ಅಗತ್ಯವಿರುವ ಪೋಷಕಾಂಶಗಳು ಸಿಗದಿದ್ದಲ್ಲಿ ಹಾಲು ಉತ್ಪಾದನೆಯಲ್ಲಿ ವ್ಯತ್ಯಯಗಳಾಗುತ್ತವೆ. ದಿನನಿತ್ಯ ನೀಡುವ ಹಸಿರು ಮೇವಿನ ಪ್ರಮಾಣ ಕಡಿಮೆಯಾದರೂ ಹಾಲು ಉತ್ಪಾದನೆಯಲ್ಲಿ ವ್ಯತ್ಯಾಸ ಕಾಣಬಹುದು. ಆದ್ದರಿಂದ ದಿನನಿತ್ಯ ಲವಣ ಮಿಶ್ರಣ ನೀಡುವುದೊಳಿತು. ಆಹಾರದಲ್ಲಿ ಎಣ್ಣೆಕಾಳು […]

ಹೆಚ್ಚು ನೀರು ಕುಡಿಸಿರಿ!

ನೀವು ಸಾಕುವ ಹಸು, ಎಮ್ಮೆ ಹೆಚ್ಚು ಹಾಲು ನೀಡಬೇಕಾದರೆ ಹೆಚ್ಚು ನೀರು ಕುಡಿಯಲೇಬೇಕು. ಏಕೆಂದರೆ ಹಾಲಿನಲ್ಲಿ ಶೇ.85 ರಷ್ಟು ನೀರೇ ಇರುತ್ತದೆ. ಇನ್ನು ಶೇ.15 ರಷ್ಟು ಉಳಿದ ಪೋಷಕಾಂಶಗಳಿರುತ್ತವೆ. ಉಳಿದ ಪೋಷಕಾಂಶಗಳಿಗಾಗಿ ಪಶು ಆಹಾರ ನೀಡುವುದರಿಂದ ಸರಿ ಹೊಂದುತ್ತದೆ. ರೈತರು ತಮ್ಮ ಜಾನುವಾರುಗಳಿಗೆ ಅವು ಕುಡಿಯುವಷ್ಟು ನೀರನ್ನು ಒದಗಿಸದಿದ್ದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ.ನೀರು ಏಕೆ ಅವಶ್ಯಕ?ಸಸಾರಜನಕ, ಕೊಬ್ಬು, ಶರ್ಕರಪಿಷ್ಟ, ಲವಣ ಮುಂತಾದ ಜೀವಸತ್ವಗಳಂತೆ ನೀರು ಕೂಡಾ ಪ್ರಮುಖವಾದ ಹಾಗೂ ಅಗತ್ಯವಾದ ಪೋಷಕಾಂಶ. ನೀರು ದೇಹದಲ್ಲಿನ ಹಲವಾರು ಶಾರೀರಿಕ […]

ಥರ್ಮಕೋಲ್ ಬಳಸಿ – ಭತ್ತದ ಸಸಿ ತಯಾರಿಸಿ

‘ದುಂಬು ಎನ್ಪ ಸೆನ್ಸ್ ಕಂಡಗ್ ಪದಿನೈನ್ ಜನ ಮೂಜಿ ದಿನೊಟ್ ನೇಜಿ ನಡ್ಪೆದ. ಇತ್ತೆ ಥರ್ಮಕೋಲ್‌ಡ್ ನೇಜಿ ಮಲ್ಪುನೆಡ್ದ್ ಆವಾರ ಎಣ್ಮ ಜನ ಒಂಜೆ ದಿನಟ್ ನಡ್ದ್ ಮುಗಿಪುಬ.’ (ಹಿಂದೆ ೮೦ ಸೆನ್ಸ್ ಗದ್ದೆಗೆೆ ನೇಜಿ ನಾಟಿ ಮಾಡಲು ಹದಿನೈದು ಮಂದಿ ಬೇಕಿತ್ತು. ಮೂರು ದಿನ ತಗಲುತ್ತಿತ್ತು. ಇದೀಗ ಥರ್ಮಕೋಲ್‌ನಲ್ಲಿ ನೇಜಿ ತಯಾರಿಸುವುದರಿಂದ ೮ ಮಂದಿ ಒಂದೇ ದಿನದಲ್ಲಿ ನೇಜಿ ನೆಟ್ಟು ಮುಗಿಸುತ್ತೇವೆ ಎನ್ನುತ್ತಾ ವಿಜಯ್ ಕುಂದರ್‌ರವರ ತಾಯಿ ಲೀಲಾವತಿ ಥರ್ಮಕೋಲ್‌ನಲ್ಲಿ ನೇಜಿ ತಯಾರಿಸುವುದರಿಂದ ರೈತರಿಗೆ ಆಗುವ […]

ಮಳೆಗಾಲದಲ್ಲಿ ಜಾನುವಾರುಗಳ ಆರೈಕೆ

ಮುಂಗಾರು ಮಳೆಯ ಹನಿಗಳು ಮನುಷ್ಯರನ್ನು ಮಾತ್ರ ತಣಿಸಬಲ್ಲವು. ಆದರೆ ಆ ಹನಿಗಳ ‘ಲೀಲೆ’ಯಿಂದ ಪರಿಸರದಲ್ಲಿ ಜಾನುವಾರುಗಳ ಪ್ರಾಣಕ್ಕೂ ಸಂಚಕಾರ ತರಬಲ್ಲ ಸೂಕ್ಷö್ಮ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಹಲವಾರು ರೋಗಗಳು ಜಾನುವಾರುಗಳನ್ನು ಪೀಡಿಸುತ್ತಿವೆ. ಬಿತ್ತನೆ ತಯಾರಿಯ ಸಮಯದಲ್ಲಿ ಎತ್ತುಗಳಿಗೆ ಕಾಯಿಲೆ ಬಂದರೆ ರೈತನಿಗೆ ಭಾರೀ ಪೆಟ್ಟು ಬಿದ್ದಂತೆ. ಆದ್ದರಿಂದ ಮಳೆಗಾಲದಲ್ಲಿ ಜಾನುವಾರುಗಳಿಗೆ ಬರುವ ರೋಗಗಳು ಮತ್ತು ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು ಎಂಬ ಮಾಹಿತಿ ಇಲ್ಲಿ ಇದೆ.ಮೂಗುಣ್ಣು / ಮೂಗೂರಿ (ಪೀನಾಸಿ ರೋಗ) : ವಿಶೇಷವಾಗಿ ಮೂಗುಣ್ಣು/ ಮೂಗುರಿ ಎಂಬ […]

ಹಣತೆಯಿಂದ ಹಣತೆಯ ಹಚ್ಚುತಾ…

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಜಗತ್ತಿನಲ್ಲಿನಲ್ಲಿರುವ ಎಲ್ಲ ಚರಾಚರ ವಸ್ತುಗಳು, ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಲೇ ಇರುತ್ತವೆ. ಅದೇ ರೀತಿ ಮನುಷ್ಯನ ಅಂತಸ್ತು ಮತ್ತು ಮನಸ್ಥಿತಿಯು ಸಹಿತ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಾ ಇರುತ್ತದೆ. ಸ್ವಾತಂತ್ರö್ಯ ಸಿಕ್ಕ ನಂತರ ಸುಮಾರು ೩೦ ವರ್ಷಗಳವರೆಗೂ ದೇಶದಲ್ಲಿ ಸಾಕಷ್ಟು ಬಡತನ ಇತ್ತು. ಜನರಿಗೆ ಮೂಲ ಅಗತ್ಯಗಳಾದ ಅನ್ನ, ವಸ್ತç, ವಸತಿ ಇವುಗಳು ಸಿಕ್ಕುವುದೇ ಕಷ್ಟವಾಗಿತ್ತು. ಅಂದಿನ ಕಾಲದ ಬಡತನವೆಂದರೆ ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ.ಎಂಬತ್ತರ ದಶಕದ ನಂತರ […]

ವಿನಯ ಸಂಪನ್ನತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜಗತ್ತಿನಲ್ಲಿ ಅನೇಕ ರೀತಿಯ ಸಂಪತ್ತುಗಳನ್ನು ಹೊಂದಿದವರಿರುತ್ತಾರೆ. ಕೆಲವರು ಗುಣ ಸಂಪನ್ನರಾದರೆ, ಕೆಲವರು ಧನ ಸಂಪನ್ನರು, ಜ್ಞಾನ ಸಂಪನ್ನರು, ಕಲಾ ಸಂಪನ್ನರು, ರೂಪ ಸಂಪನ್ನರು, ವಿದ್ಯಾ ಸಂಪನ್ನರು. ಈ ಎಲ್ಲಾ ಸಂಪತ್ತುಗಳಿದ್ದಾಗಲೇ ಸಮಾಜಕ್ಕೆ ಶೋಭೆ. ಆದರೆ ವಿದ್ಯೆ, ರೂಪ, ಗುಣ, ಧನ, ಕಲೆ, ಜ್ಞಾನ ಎಲ್ಲಾ ಇದ್ದು ವಿನಯವಂತರಾಗಿಲ್ಲದಿದ್ದರೆ, ಅಂಥವರೊAದಿಗೆ ವ್ಯವಹರಿಸುವುದು ಕಷ್ಟ. ಧನಿಕನಿದ್ದು ಅಹಂಕಾರಿಯಾದರೆ, ಸಹಾಯ ಯಾಚಿಸಲು ಆತನ ಬಳಿ ಹೋಗಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಜ್ಞಾನಿ, ವಿದ್ವಾಂಸ ವಿದ್ಯಾವಂತ ಅನ್ನಿಸಿಕೊಂಡವನಲ್ಲಿ […]

ಕಂತು ಬಾಕಿಗೆ ಗುಡ್ ಬೈ ಹೇಳೋಣ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ನಮ್ಮ ಸದಸ್ಯ ಬಂಧುಗಳಲ್ಲಿ ಒಂದು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸಿ ತನ್ಮೂಲಕ ಅವರ ಆರ್ಥಿಕ ಸಬಲೀಕರಣವನ್ನು ಸಾಧಿಸುವುದು ನಮ್ಮ ಯೋಜನೆಯ ಪ್ರಮುಖ ಧ್ಯೇಯೋದ್ದೇಶಗಲ್ಲೊಂದಾಗಿದೆ. ಸಮಾನ ಮನಸ್ಕರನ್ನು ಒಗ್ಗೂಡಿಸಿ ಸಂಘ ರಚಿಸಿ ಅನೇಕ ಹಂತದ ತರಬೇತಿಗಳ ಮೂಲಕ ಒಂದು ಉತ್ತಮವಾದ ಆರ್ಥಿಕ ಶಿಸ್ತು, ಸಂಘ ಬದ್ಧತೆ ಹಾಗೂ ಕೆಲವು ಜೀವನ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇಂತಹ ಶಿಸ್ತುಬದ್ಧ ಸದಸ್ಯರನ್ನೊಳಗೊಂಡ ಗುಂಪುಗಳನ್ನು ಅರ್ಹತಾನುಸಾರವಾಗಿ ಬ್ಯಾಂಕ್‌ನೊAದಿಗೆ ಆರ್ಥಿಕ […]

ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳೋಣ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ‘ಬದಲಾವಣೆ ಜಗದ ನಿಯಮ’ ಎಂಬ ಮಾತಿದೆ. ಇದು ನಿತ್ಯ, ಸತ್ಯ. ಬದಲಾವಣೆ ಎನ್ನುವುದು ಆಗುತ್ತಿರಬೇಕು. ಜಗತ್ತು ಜಡವಾಗಿರಬಾರದು. ನಾವು ಅಡುಗೆ ಮನೆಯಲ್ಲಿ ಇನ್ನೂ ಕಟ್ಟಿಗೆಯನ್ನೇ ಬಳಸಬೇಕು, ಇದ್ದಿಲನ್ನೇ ಬಳಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಆಹಾರ – ವಿಹಾರ – ವಿಚಾರದಲ್ಲಿ ಬದಲಾವಣೆ ಆಗುತ್ತಲೇ ಇರಬೇಕು. ಆದರೆ ಅದರಿಂದ ಸೋಮಾರಿತನ, ದೈಹಿಕ ಆಲಸ್ಯ ಉಂಟಾಗಬಾರದು. ಆದರೆ ಇಂದು ಆಹಾರ – ವಿಹಾರ – ವಿಚಾರದಲ್ಲಿ ನಾವೆಷ್ಟು ಬದಲಾಗಿದ್ದೇವೆ ಎಂದರೆ ನಮ್ಮ ಬದಲಾವಣೆ ಆರೋಗ್ಯದ […]