ಇಂದುಧರ ಹಳೆಯಂಗಡಿ
ಶಿಕ್ಷಕರ ದಿನಾಚರಣೆ ಬಂದಾಗಲೆಲ್ಲ ಒಂದು ಕ್ಷಣ ನಮ್ಮ ಮನಸ್ಸು ನಮ್ಮ ಶಾಲಾ ದಿನಗಳತ್ತ ಹೊರಳುತ್ತದೆ. ಪಾಠ ಹೇಳಿಕೊಟ್ಟ ಶಿಕ್ಷಕರು, ಅವರ ಪಾಠ, ಬೆತ್ತದ ರುಚಿ, ಕಪ್ಪು ಹಲಗೆ, ಪಠ್ಯಪುಸ್ತಕ ಇತ್ಯಾದಿ. ಆದರೆ ಇಂದಿನ ತರಗತಿ ಕೋಣೆ ಹಿಂದಿನಂತಿಲ್ಲ. ಪ್ರಾಜೆಕ್ಟರ್, ಸ್ಮಾರ್ಟ್ ಕ್ಲಾಸ್, ವೀಡಿಯೋ ಕ್ಲಾಸ್ ಎಲ್ಲವೂ ಬಂದಿದೆ. ಗೋಡೆಗಳೇ ಇಲ್ಲದ ತರಗತಿಗಳು, ಆನ್ಲೈನ್ ಕ್ಲಾಸ್ಗಳು ಚಾಲ್ತಿಯಲ್ಲಿವೆ. ಕಾಲ ಬದಲಾದಂತೆ ಶಿಕ್ಷಣ ಕ್ಷೇತ್ರವೂ ವೇಗವಾಗಿ ಬದಲಾಗುತ್ತಿದೆ. ಈ ಬದಲಾವಣೆಯ ಅತ್ಯಂತ ಕುತೂಹಲಕಾರಿ ಫಲವೆಂದರೆ ಇಂದು ಹುಟ್ಟಿಕೊಳ್ಳುತ್ತಿರುವ ಹೊಸ ಕೋರ್ಸ್ಗಳು. ಈ ಬಾರಿಯ ಶಿಕ್ಷಕರ ದಿನಾಚರಣೆಯ ನೆಪದಲ್ಲಿ ಈ ಬದಲಾವಣೆಯತ್ತ ಒಂದಷ್ಟು ಕಣ್ಣು ಹಾಯಿಸೋಣ.
ಬೆಳೆಯುತ್ತಿರುವ ಶಿಕ್ಷಣ ಕ್ಷೇತ್ರ : ಕೆಲವೇ ವರ್ಷಗಳ ಹಿಂದೆ ಶಿಕ್ಷಣವೆಂದರೆ ಶಾಲಾ ಕಾಲೇಜುಗಳ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು. ಇಂದು ಆ ಚಿತ್ರಣ ಸಂಪೂರ್ಣ ಬದಲಾಗಿದೆ. ಶಾಲಾ-ಕಾಲೇಜುಗಳ ಸಂಖ್ಯೆ ಹೆಚ್ಚಿದೆ. ಜೊತೆಗೆ ಆನ್ಲೈನ್ ಶಿಕ್ಷಣ ಮತ್ತು ಡಿಜಿಟಲ್ ಕಲಿಕೆ ಎಂಬ ಹೊಸ ಪ್ರಪಂಚವೊAದು ನಮ್ಮೆದುರು ತೆರೆದುಕೊಂಡಿದೆ. ಈಗ ಒಬ್ಬ ವಿದ್ಯಾರ್ಥಿ ತನ್ನದೇ ಊರಿನಲ್ಲಿ ತನ್ನದೇ ಮನೆಯ ಮೂಲೆಯಲ್ಲಿ ಕುಳಿತು ಬೆಂಗಳೂರಿನ ಅಥವಾ ಬೇರೆ ನಗರದ, ಬೇರೆ ದೇಶದ ಪ್ರಾಧ್ಯಾಪಕರ ಪಾಠವನ್ನು ಮೊಬೈಲ್ನಲ್ಲೇ ಕೇಳಬಹುದು. ಇದರ ಹಿಂದೆ ತಂತ್ರಜ್ಞಾನದ ದೊಡ್ಡ ಪಾತ್ರವಿದೆ. ಇ-ಲರ್ನಿಂಗ್ ವೇದಿಕೆಗಳು, ಮೊಬೈಲ್ ಆ್ಯಪ್ಗಳು ಮತ್ತು ಈಗ ಎಐ ಆಧಾರಿತ ಕಲಿಕಾ ಸಾಧನಗಳು ಕಲಿಕೆಯ ವಿಧಾನವನ್ನೇ ಬದಲಿಸಿವೆ. ಒಂದು ವಿಷಯವನ್ನು ಎಷ್ಟು ಬಾರಿ ಬೇಕಾದರೂ ಪುನರಾವರ್ತಿಸಿ ಕಲಿಯುವ, ತನ್ನ ವೇಗಕ್ಕೆ ತಕ್ಕಂತೆ ಮುಂದುವರಿಯುವ ಅವಕಾಶ ಇಂದಿನ ವಿದ್ಯಾರ್ಥಿಗಳಿಗಿದೆ. ಈ ವಿಸ್ತಾರ ಮತ್ತು ತಂತ್ರಜ್ಞಾನದ ಪ್ರಭಾವವೇ ಒಂದು ಹೊಸ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. ಹೊಸ ಕೋರ್ಸ್ ಗಳ ಹುಟ್ಟಿಗೂ ಕಾರಣವಾಗಿವೆ.
ಬದಲಾಗುತ್ತಿರುವ ಕಾಲದಲ್ಲಿ ಹೊಸ ಕೋರ್ಸ್ : ಇಂದು ಶಿಕ್ಷಣ ಸಂಸ್ಥೆಗಳು ಕೇವಲ ಸಾಂಪ್ರದಾಯಿಕ ಬಿ.ಎ, ಬಿ.ಕಾಂ, ಬಿ.ಎಸ್ಸಿ ಕೋರ್ಸ್ಗಳಿಗೆ ಸೀಮಿತವಾಗಿಲ್ಲ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ, ಡಿಜಿಟಲ್ ಮಾರ್ಕೆಟಿಂಗ್ನAತಹ ಹೊಸ ಕೋರ್ಸ್ಗಳು ಈಗ ಜನಪ್ರಿಯವಾಗುತ್ತಿವೆ. ಇವುಗಳ ಜೊತೆಗೆ ಕಡಿಮೆ ಅವಧಿಯ ಕೌಶಲ್ಯ ಆಧಾರಿತ ಮತ್ತು ವೃತ್ತಿಪರ ಕೋರ್ಸ್ಗಳಿಗೂ ಬೇಡಿಕೆ ಹೆಚ್ಚುತ್ತಿದೆ.
ಈ ಕೋರ್ಸ್ಗಳ ವಿಶೇಷತೆ ಏನೆಂದರೆ ಇವು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗಿರದೆ, ನೇರವಾಗಿ ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯಗಳನ್ನು ಕಲಿಸುತ್ತವೆ. ಸಾಂಪ್ರದಾಯಿಕ ಪದವಿಗಳು ಸೈದ್ಧಾಂತಿಕ ತಳಹದಿ ಕೊಟ್ಟರೆ, ಈ ಹೊಸ ಕೋರ್ಸ್ಗಳು ಪ್ರಾಯೋಗಿಕ ಜ್ಞಾನ ಮತ್ತು ಬೇಡಿಕೆಗೆ ತಕ್ಕ ಕೌಶಲ್ಯಗಳನ್ನು ನೀಡುತ್ತವೆ. ಹೀಗಾಗಿಯೇ ಇಂದಿನ ಯುವ ಜನಾಂಗ ಇವುಗಳತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ.
ಎಐ, ಡೇಟಾ ಸೈನ್ಸ್ ಮತ್ತು ಟೆಕ್ನಾಲಜಿ ಕೋರ್ಸ್ : ಶಿಕ್ಷಣ ಕ್ಷೇತ್ರದಲ್ಲಿ ಈ ಮೊದಲಿನಿಂದಲೂ ಬೇಡಿಕೆ ಕಾಣುತ್ತಿರುವ ಒಂದು ವಿಭಾಗ ತಂತ್ರಜ್ಞಾನ. ಇಂಜಿನಿಯರಿಂಗ್ನಿಂದ ಮೊದಲ್ಗೊಂಡು, ಈಗೀಗ ಬಿಸಿಎ, ಎಂಸಿಎವರೆಗೂ ವಿದ್ಯಾರ್ಥಿಗಳ ಬೇಡಿಕೆ ಗಿಟ್ಟಿಸಿವೆ. ಇಂದಿನ ದಿನಗಳಲ್ಲಿ ಆ ವಿಷಯಗಳು ಇನ್ನಷ್ಟು ವಿಸ್ತಾರಗೊಂಡಿವೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿಯಂತಹ ಕೋರ್ಸ್ಗಳು ಪ್ರತಿಯೊಂದು ಉದ್ಯಮವನ್ನೂ ಪ್ರವೇಶಿಸಿರುವುದರಿಂದ ಕಂಪ್ಯೂಟರ್ ಜ್ಞಾನ ಮತ್ತು ತಾರ್ಕಿಕ ಚಿಂತನೆಗಳನ್ನು ಇಷ್ಟಪಡುವ ವಿದ್ಯಾರ್ಥಿಗಳು ಅಂತಹ ಕೋರ್ಸ್ಗಳ ಕಡೆಗೆ ವಾಲುತ್ತಿದ್ದಾರೆ. ಇದು ಸಹಜ ಆಯ್ಕೆಯಾಗಿಯೂ ಮಾರ್ಪಟ್ಟಿದೆ. ಜೊತೆಗೆ ಉತ್ತಮ ಸಂಬಳ ಮತ್ತು ಜಾಗತಿಕ ಅವಕಾಶಗಳ ಭರವಸೆಯೂ ಇಲ್ಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್, ಜನರೇಟಿವ್ ಎಐ ಮತ್ತು ಪ್ರಾಂಪ್ಟ್ ಎಂಜಿನಿಯರಿಂಗ್, ವೆಬ್ ಡೆವಲಪ್ಮೆಂಟ್, ಯುಐ-ಯುಎಕ್ಸ್ ಡಿಸೈನ್, ಬ್ಲಾಕ್ಚೈನ್ ಟೆಕ್ನಾಲಜಿಯಂತಹ ಹತ್ತು ಹಲವು ಎಐ ಹಾಗೂ ತಂತ್ರಜ್ಞಾನ ಆಧಾರಿತ ಕೋರ್ಸ್ಗಳು ಬಹುಬೇಡಿಕೆಯನ್ನು ಗಿಟ್ಟಿಸುತ್ತಿವೆ.
ವಾಣಿಜ್ಯ ಮತ್ತು ಬ್ಯುಸಿನೆಸ್ ಕೋರ್ಸ್ : ಶೈಕ್ಷಣಿಕ ಕ್ಷೇತ್ರದಲ್ಲಿ ವಾಣಿಜ್ಯ ಕ್ಷೇತ್ರ ಕೂಡ ಹಿಂದೆ ಬಿದ್ದಿಲ್ಲ. ಬರೀ ಬ್ಯಾಲೆನ್ಸ್ ಶೀಟ್ ಮತ್ತು ಲೆಕ್ಕಪತ್ರಕ್ಕೆ ಸೀಮಿತವಾಗಿದ್ದ ಕಾಮರ್ಸ್ ಇಂದು ಬ್ಯುಸಿನೆಸ್ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್ನAತಹ ಸ್ಪೆಷಲೈಜೇಷನ್ ಕೋರ್ಸ್ಗಳನ್ನು ನೀಡುತ್ತಿದೆ. ವಾಣಿಜ್ಯ ಕ್ಷೇತ್ರದ ಹೊಸ ಕೋರ್ಸ್ಗಳತ್ತ ಕಣ್ಣಾಡಿಸುವುದಾದರೆ, ಬ್ಯುಸಿನೆಸ್ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್, ಆನ್ಲೈನ್ ಎಂಬಿಎ ಸ್ಪೆಷಲೈಜೇಷನ್ ಕೋರ್ಸ್ಗಳು (ಮಾರ್ಕೆಟಿಂಗ್, ಫೈನಾನ್ಸ್, ಎಚ್ಆರ್, ಆಪರೇಶನ್ಸ್), ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ ಬ್ಯಾಂಕಿAಗ್, ಸಪ್ಲೆöÊ ಚೈನ್ ಮ್ಯಾನೇಜ್ಮೆಂಟ್, ಆಂಟ್ರಪ್ರೆನೂರ್ಶಿಪ್ ಮತ್ತು ಸ್ಟಾರ್ಟ್ ಅಪ್ ಮ್ಯಾನೇಜ್ಮೆಂಟ್, ಹ್ಯೂಮನ್ ರಿಸೋರ್ಸ್ ಅನಾಲಿಟಿಕ್ಸ್ ಇತ್ಯಾದಿ.
ಮಾನವಿಕ ಮತ್ತು ಸಮಾಜ ವಿಜ್ಞಾನ ಕೋರ್ಸ್ : ಕಲಾ ವಿಭಾಗದಲ್ಲೂ ವಿಶೇಷ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಸುವ ಕೋರ್ಸ್ಗಳು ಬಂದಿವೆ. ಮನೋವಿಜ್ಞಾನ, ಬಿಹೇವಿಯರಲ್ ಎಕನಾಮಿಕ್ಸ್, ಮ್ಯೂಸಿಯಾಲಜಿ, ಕ್ರಿಮಿನಾಲಜಿ, ಫೊರೆನ್ಸಿಕ್ ಸ್ಟಡೀಸ್, ಫಿಲ್ಮ್ ಸ್ಟಡೀಸ್, ಪೊಲಿಟಿಕಲ್ ಅನಾಲಿಸ್ಟ್, ಪಬ್ಲಿಕ್ ರಿಲೇಷನ್, ಪತ್ರಿಕೋದ್ಯಮ, ಡಿಜಿಟಲ್ ಮೀಡಿಯಾ, ಜಿಯೋಪಾಲಿಟಿಕ್ಸ್, ಜೆಂಡರ್ ಸ್ಟಡೀಸ್ ಇಂತಹ ಹೊಚ್ಚಹೊಸ ವೃತ್ತಿ ಆಧಾರಿತ ಕೋರ್ಸ್ಗಳು ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ.
ಅಂತರ್ಶಿಸ್ತೀಯ/ಹೈಬ್ರಿಡ್ ಪದವಿಗಳು : ಇಂದಿನ ಉದ್ಯೋಗ ಮಾರುಕಟ್ಟೆಗೆ ಒಂದೇ ವಿಷಯದ ಜ್ಞಾನ ಸಾಲದು ಎಂಬ ಅರಿವು ಬೆಳೆಯುತ್ತಿದೆ. ಹೀಗಾಗಿ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್, ಡಿಸೈನ್ ಮತ್ತು ಕಂಪ್ಯೂಟರ್ ಸೈನ್ಸ್ನಂತಹ ಎರಡು ಕ್ಷೇತ್ರಗಳನ್ನು ಬೆಸೆಯುವ ಹೈಬ್ರಿಡ್ ಪದವಿಗಳು ಜನಪ್ರಿಯವಾಗುತ್ತಿವೆ. ಇವು ವಿದ್ಯಾರ್ಥಿಗಳಿಗೆ ವಿಶಾಲ ದೃಷ್ಟಿಕೋನ ಮತ್ತು ಬಹುಮುಖ ಕೌಶಲ್ಯಗಳನ್ನು ಒದಗಿಸುತ್ತವೆ. ಎಐ ಕಂಟೆಂಟ್ ಸ್ಟಾçಟಜಿ, ಬಯೋ ಸ್ಟಾಟಿಸ್ಟಿಕ್ಸ್, ಎನ್ವಿರಾನ್ಮೆಂಟಲ್ ಎಕನಾಮಿಕ್ಸ್, ಬಯೋ ಇನ್ಫಾರ್ಮೆಟಿಕ್ಸ್, ಹೆಲ್ತ್ಕೇರ್ ಮ್ಯಾನೇಜ್ಮೆಂಟ್, ಸ್ಪೋರ್ಟ್ಸ್ ಜರ್ನಲಿಸಂ ಹೀಗೆ ಎರಡು ವಿಭಿನ್ನ ಕ್ಷೇತ್ರಗಳ ನೈಪುಣ್ಯತೆಯನ್ನು ಒಂದೇ ಕೋರ್ಸ್ ನೀಡುತ್ತಿದೆ ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿಯೂ ಇಂತಹ ನಿಪುಣ ಪದವೀಧರರಿಗೆ ಹೆಚ್ಚು ಬೇಡಿಕೆಯಿದೆ.
ವೃತ್ತಿಪರ/ಕೌಶಲ್ಯ ಆಧಾರಿತ ಕೋರ್ಸ್ಗಳು : ಇಂದು ಪದವಿಯ ವ್ಯಾಖ್ಯಾನವೇ ಬದಲಾಗಿದೆ. ಪ್ರಾಯೋಗಿಕ ಹಾಗೂ ವೃತ್ತಿಪರ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಜೊತೆಗೆ ಶಾರ್ಟ್ ಟರ್ಮ್ ಕ್ಯಾಶ ಕೋರ್ಸ್ ಗಳು ಹಾಗೂ ವೃತ್ತಿಪರ ಪದವಿ ಕೋರ್ಸ್ಗಳು, ವೊಕೇಶನಲ್ ಪದವಿ, ಡಿಪ್ಲೊಮಾಗಳಂತಹ ಕೌಶಲ್ಯ ಆಧಾರಿತ ಕೋರ್ಸ್ಗಳು ಶೀಘ್ರ ಉದ್ಯೋಗಾವಕಾಶ ಮತ್ತು ಪ್ರಾಯೋಗಿಕ ಕಲಿಕೆಯ ಕಾರಣಕ್ಕೆ ಹೆಚ್ಚು ಜನಪ್ರಿಯವಾಗುತ್ತಿವೆ.
ಶಾರ್ಟ್ಟರ್ಮ್ ಡಿಜಿಟಲ್ ಮಾರ್ಕೆಟಿಂಗ್ ಡಿಪ್ಲೊಮಾ, ಆ್ಯನಿಮೇಶನ್, ಏರ್ ಹಾಸ್ಟೆಸ್, ಫ್ಯಾಶನ್ ಡಿಸೈನ್, ಹೋಟೆಲ್ ಮ್ಯಾನೇಜ್ಮೆಂಟ್, ವಿದೇಶಿ ಭಾಷಾ ಕೋರ್ಸ್ಗಳು (ಜರ್ಮನ್/ಫ್ರೆಂಚ್/ಜಪಾನೀಸ್), ಗ್ರಾಫಿಕ್ ಡಿಸೈನ್, ಫೋಟೋಗ್ರಫಿ ಮತ್ತು ವೀಡಿಯೋ ಎಡಿಟಿಂಗ್, ಇಂಟೀರಿಯರ್ ಡಿಸೈನ್, ಕಲಿನರಿ ಆರ್ಟ್ಸ್, ಬ್ಯೂಟಿ ಮತ್ತು ವೆಲ್ನೆಸ್ ಕೋರ್ಸ್ಗಳು ಉತ್ತಮ ಉದ್ಯೋಗಾವಕಾಶವನ್ನು ನೀಡುತ್ತಿವೆ.
ಈ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ : ಹೊಸ ಕೋರ್ಸ್ ಗಳನ್ನು ಕಲಿಸಲು ಶಿಕ್ಷಕರೂ ಸಹ ನಿರಂತರವಾಗಿ ಹೊಸದನ್ನು ಕಲಿಯುತ್ತಿದ್ದಾರೆ. ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರ ವಿದ್ಯಾರ್ಹತೆ ಬೇರೆಯೇ ಆಗಿದ್ದರೂ ಬಹುವೇಗವಾಗಿ ಹೊಸ ವಿಷಯ ಕಲಿಯುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಒಬ್ಬ ವಿದ್ಯಾರ್ಥಿಗೆ ಸರಿಯಾದ ದಿಕ್ಕು ತೋರಿಸುವ, ಪ್ರೋತ್ಸಾಹಿಸುವ, ಆತ್ಮವಿಶ್ವಾಸ ತುಂಬುವ ಕೆಲಸವನ್ನು ಒಂದು ಆ್ಯಪ್ ಅಥವಾ ಯಂತ್ರ ಮಾಡಲಾರದು. ಅದನ್ನು ಮಾಡುವವರು ಶಿಕ್ಷಕರೇ. ಹೀಗಾಗಿ ಕೋರ್ಸ್ಗಳು ಎಷ್ಟೇ ಹೊಸದಾದರೂ, ಶಿಕ್ಷಕರ ಮಾರ್ಗದರ್ಶನವಿಲ್ಲದೆ ಆ ಕಲಿಕೆ ಪೂರ್ಣವಾಗುವುದಿಲ್ಲ.
ಶಿಕ್ಷಣ ಕ್ಷೇತ್ರ ಬೆಳೆದಂತೆ, ತಂತ್ರಜ್ಞಾನ ಮುಂದುವರಿದAತೆ ಹೊಸ ಹೊಸ ಕೋರ್ಸ್ ಗಳು ಹುಟ್ಟುತ್ತಲೇ ಇರುತ್ತವೆ. ಆದರೆ ಈ ಎಲ್ಲ ಬದಲಾವಣೆಗಳ ನಡುವೆಯೂ ಶಿಕ್ಷಕರು ಮಾತ್ರ ಎಂದಿಗೂ ಅನಿವಾರ್ಯ.