ರಿಕ್ಷಾವೇ ಗ್ರಂಥಾಲಯ

‘ಓದು’ ಎಂಬುವುದು ಮಾನವನ ಉತ್ತಮ ಹವ್ಯಾಸಗಳಲ್ಲೊಂದು. ಓದು ವ್ಯಕ್ತಿಯನ್ನು ಮಾನಸಿಕ, ಸಾಮಾಜಿಕವಾಗಿ ಬೆಳೆಸುತ್ತದೆ. ತಾನು ಓದುವ ಜೊತೆಗೆ ಇತರರನ್ನು ಓದುವಂತೆ ಪ್ರೇರೇಪಿಸುವ ಬಹುದೊಡ್ಡ ಬಳಗವೇ ಇದೆ. ಓದಿನಿಂದ ದೊರೆಯುವ ಖುಷಿಯ ಅನುಭವವಾಗಬೇಕಾದರೆ ಮೊದಲು ನಾವು ಓದುಗರಾಗಬೇಕು. ಓದಲು ಬೇಕಾದ ಪುಸ್ತಕ ಎಲ್ಲಿ ಲಭ್ಯ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಸಾಮಾನ್ಯವಾಗಿ ಊರಿನಲ್ಲಿರುವ ಗ್ರಂಥಾಲಯಗಳು ಓದುಗರ ಓದಿನ ದಾಹವನ್ನು ತಣಿಸುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ತಾಲೂಕಿನ ಓದುಗರು ಪುಸ್ತಕಗಳಿಗಾಗಿ ಗ್ರಂಥಾಲಯವನ್ನೇ ಅವಲಂಬಿಸಬೇಕಾಗಿಲ್ಲ. ಇದೇ ಊರಿನಲ್ಲಿ ಓಡಾಡುತ್ತಿರುವ […]

311 ವರ್ಷಗಳ ಸ್ವಾದ ತಿರುಪತಿ ಲಡ್ಡು ಪ್ರಸಾದ

ಡಾ. ಚಂದ್ರಹಾಸ್ ಚಾರ್ಮಾ‍ಡಿ ತಿರುಪತಿಯ ಹೆಸರು ಕೇಳಿದೊಡನೆ ತಕ್ಷಣ ನೆನಪಾಗುವುದು ವಿಶೇಷ ರುಚಿ ಮತ್ತು ಪರಿಮಳವನ್ನು ಹೊಂದಿರುವ ಅಲ್ಲಿನ ಲಡ್ಡು ಪ್ರಸಾದ. ತಿರುಪತಿ ಲಡ್ಡಿಗೆ ಆಗಸ್ಟ್ 2ರಂದು 311 ವರ್ಷಗಳು ಪೂರ್ಣಗೊಂಡಿವೆ. ಬರೋಬ್ಬರಿ ಮೂರು ಶತಮಾನಗಳು ಕಳೆದರೂ ಲಡ್ಡುವಿನ ರುಚಿ ಮಾತ್ರ ಹಾಗೇ ಇದೆ. ಲಡ್ಡು ಪ್ರಸಾದ ಹುಟ್ಟಿದ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ.ನೈವೇದ್ಯವಾಗಿ ಲಡ್ಡು : 1715ರ ಆಗಸ್ಟ್ 2 ರಂದು ಮೊದಲ ಬಾರಿಗೆ ದಪ್ಪ ಬೂಂದಿಯ ಲಡ್ಡು ತಯಾರಿಸಿ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗಿತ್ತು. […]

ಬುದ್ಧಿ ಅಭಾವ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆವರು ದೋಣಿಯೊಂದರಲ್ಲಿ ಒಂದಷ್ಟು ಮಂದಿ ಪ್ರಯಾಣ ಮಾಡುತ್ತಿರಬೇಕಾದರೆ ಜೋರಾಗಿ ಬೀಸುತ್ತಿದ್ದ ಬಿರುಗಾಳಿಗೆ ದೋಣಿ ಮಗುಚಿ ಬಿದ್ದು ಕೆಲವರು ನೀರು ಪಾಲಾಗುತ್ತಾರೆ. ಇವರಲ್ಲಿ ಇಬ್ಬರು ಹೇಗೋ ದಡ ಸೇರುತ್ತಾರೆ. ಅವರಲ್ಲಿ ಒಬ್ಬ ತನ್ನ ಲ್ಯಾಪ್‌ಟಾಪ್ ಅನ್ನು ಬ್ಯಾಗ್‌ನಲ್ಲಿ ಇಟ್ಟಿದ್ದ, ಮತ್ತೊಬ್ಬನ ಬ್ಯಾಗ್‌ನಲ್ಲಿ ಒಂದು ಕೊಳಲು ಇತ್ತು. ಅವು ಸುರಕ್ಷಿತವಾಗಿದ್ದವು. ಸ್ವಲ್ಪ ಸಮಯ ಸುಧಾರಿಸಿಕೊಂಡ ಬಳಿಕ ನೋಡಿದರೆ ದೋಣಿ ಒಡೆದು ಅದು ಕೂಡಾ ದಡಕ್ಕೆ ಬಂದು ಸೇರಿಕೊಂಡಿರುತ್ತದೆ. ಇಬ್ಬರಿಗೂ ಈ ನಿರ್ಜನ ಪ್ರದೇಶದಲ್ಲಿ ಏನು ಮಾಡುವುದೆಂದು […]

ಜೀವನೋತ್ಸವ ತುಂಬಿದ ಗ್ರಾ. ಯೋಜನೆಯ ನವಚೇತನ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ಗ್ರಾಮ ಕಲ್ಯಾಣ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ‘ನವಚೇತನ’ ಕಾರ್ಯಕ್ರಮದ ಕುರಿತು ವಿವರವಾಗಿ ತಿಳಿದುಕೊಳ್ಳೋಣ.ಎಷ್ಟೋ ಮಕ್ಕಳು ಹುಟ್ಟುತ್ತಲೆ ವಿಶೇಷಚೇತನರಾಗಿರುತ್ತಾರೆ.ಅವರು ಅಸಹಾಯಕರಾಗಿ ಜೀವನದಲ್ಲಿ ಕಷ್ಟವನ್ನು ಅನುಭವಿಸಬೇಕಾಗಿರುತ್ತದೆ. ಅವರಿಗೂ ಎಲ್ಲರಂತೆ ಶಿಕ್ಷಣ ನೀಡಿ ಮಾನಸಿಕ ಧೈರ್ಯ, ಆತ್ಮಾಭಿಮಾನ ತುಂಬುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕಾಗಿದೆ.ಹಾಗೆಂದು ಸಾಮಾನ್ಯ ಮಕ್ಕಳೊಂದಿಗೆ ವಿಶೇಷಚೇತನರಿಗೆ ಶಿಕ್ಷಣ ನೀಡುವುದು ಅಷ್ಟು ಸುಲಭದ ಮಾತಲ್ಲ. ಸರಕಾರ ವಿಶೇಷಚೇತನರಿಗೂ ಸರಿಯಾದ […]

ಅಧಿವೇಶನಗಳು ಹೇಗೆ ನಡೆಯುತ್ತವೆ…

ರಾಜೀವ ಹೆಗಡೆ ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ‘ಅಧಿವೇಶನ’ ಎನ್ನುವುದು ಸಂವಿಧಾನಬದ್ಧ ಕಾರ್ಯಕಲಾಪವಾಗಿದೆ. ಯಾವುದೇ ಚುನಾಯಿತ ಸರಕಾರವು ಅಧಿವೇಶನದಿಂದ ಓಡಿಹೋಗಲು ಅವಕಾಶವಿಲ್ಲ. ಜನರ ಧ್ವನಿ, ಬೇಡಿಕೆಯನ್ನು ಜನಪ್ರತಿನಿಧಿಗಳ ಮೂಲಕ ಸರಕಾರದ ಕಿವಿಗೆ ಹಾಕಲು ಹಾಗೂ ಸುಸೂತ್ರ ಆಡಳಿತಕ್ಕಾಗಿ ಬೇಕಾಗುವ ಕಾನೂನು ರೂಪಿಸಲು ಇರುವ ಶಾಸನಬದ್ಧ ಅಧಿಕಾರವೇ ಅಧಿವೇಶನ. ಈ ಅಧಿವೇಶನವನ್ನು ಇತ್ತೀಚೆಗೆ ನಾವು ಕೇವಲ ರಾಜಕೀಯ, ಗಲಾಟೆ ಹಾಗೂ ಇತರ ವಿವಾದಗಳಿಂದ ನೋಡುತ್ತಿರಬಹುದು. ಆದರೆ ಅಧಿವೇಶನಗಳಿಲ್ಲದೆ ಯಾವುದೇ ಕೇಂದ್ರ ಅಥವಾ ರಾಜ್ಯ ಸರಕಾರವನ್ನು ಸಂವಿಧಾನಾತ್ಮಕವಾಗಿ ನಡೆಸಲು ಸಾಧ್ಯವೇ ಇಲ್ಲ.ಭಾರತದ […]

96ರ ವೃದ್ಧೆ ನಿರಂತರ ಓದುವ ಶ್ರದ್ಧೆ

ಓದುವ ಹವ್ಯಾಸವನ್ನು ಒಮ್ಮೆ ಬೆಳೆಸಿಕೊಂಡರೆ ಅದು ಮತ್ತೆ ಎಂದಿಗೂ ನಮ್ಮನ್ನು ಬಿಡಲಾರದು. ನಿತ್ಯ ಜ್ಞಾನವಂತರನ್ನಾಗಿಸುತ್ತಾ ದಿನನಿತ್ಯದ ಕೆಲಸಗಳ ಜೊತೆ ಜೊತೆಗೆ ಓದು ಸಾಗುತ್ತಿರುತ್ತದೆ. ಕಷ್ಟ, ನೋವು, ಒತ್ತಡದ ಬದುಕಿನಿಂದ ನಮ್ಮನ್ನು ದೂರವಾಗಿಸುತ್ತದೆ. ಓದಿನಿಂದ ದೊರೆಯುವ ನೆಮ್ಮದಿ ಬೇರೆ ಯಾವುದರಿಂದಲೂ ದೊರೆಯಲಾರದು. ಈ ಮಾತಿಗೆ ಉತ್ತಮ ಉದಾಹರಣೆ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಶಾಂತಾಬಾಯಿ. 96 ವರ್ಷ ಪ್ರಾಯದ ಶಾಂತಾಬಾಯಿ ಸಿದ್ದಪ್ಪ ಕಿಲ್ಲೆದ್‌ರವರು ‘ನಿರಂತರ’ ಪತ್ರಿಕೆಯನ್ನು ಕಳೆದ ಹತ್ತು ವರ್ಷಗಳಿಂದ ಓದುತ್ತಿದ್ದಾರೆ. ಪತ್ರಿಕೆಯಲ್ಲಿ ಬರುವ ಬರಹಗಳು ಅವರ ಜ್ಞಾನಮಟ್ಟವನ್ನು […]

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಅರಳುತ್ತಿರುವ ಹೊಸ ಕೋರ್ಸ್

ಇಂದುಧರ ಹಳೆಯಂಗಡಿ ಶಿಕ್ಷಕರ ದಿನಾಚರಣೆ ಬಂದಾಗಲೆಲ್ಲ ಒಂದು ಕ್ಷಣ ನಮ್ಮ ಮನಸ್ಸು ನಮ್ಮ ಶಾಲಾ ದಿನಗಳತ್ತ ಹೊರಳುತ್ತದೆ. ಪಾಠ ಹೇಳಿಕೊಟ್ಟ ಶಿಕ್ಷಕರು, ಅವರ ಪಾಠ, ಬೆತ್ತದ ರುಚಿ, ಕಪ್ಪು ಹಲಗೆ, ಪಠ್ಯಪುಸ್ತಕ ಇತ್ಯಾದಿ. ಆದರೆ ಇಂದಿನ ತರಗತಿ ಕೋಣೆ ಹಿಂದಿನಂತಿಲ್ಲ. ಪ್ರಾಜೆಕ್ಟರ್, ಸ್ಮಾರ್ಟ್ ಕ್ಲಾಸ್, ವೀಡಿಯೋ ಕ್ಲಾಸ್ ಎಲ್ಲವೂ ಬಂದಿದೆ. ಗೋಡೆಗಳೇ ಇಲ್ಲದ ತರಗತಿಗಳು, ಆನ್‌ಲೈನ್ ಕ್ಲಾಸ್‌ಗಳು ಚಾಲ್ತಿಯಲ್ಲಿವೆ. ಕಾಲ ಬದಲಾದಂತೆ ಶಿಕ್ಷಣ ಕ್ಷೇತ್ರವೂ ವೇಗವಾಗಿ ಬದಲಾಗುತ್ತಿದೆ. ಈ ಬದಲಾವಣೆಯ ಅತ್ಯಂತ ಕುತೂಹಲಕಾರಿ ಫಲವೆಂದರೆ ಇಂದು ಹುಟ್ಟಿಕೊಳ್ಳುತ್ತಿರುವ […]

ಸಮಾಜದ ಶಕ್ತಿ ಶ್ರೀ ಕೃಷ್ಣ ಮತ್ತು ಗಣಪ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಭಗವಾನ್ ಶ್ರೀ ಕೃಷ್ಣನ ‘ಮಾಖನ್ ನ ಖಾಯೋ ಮೇರಿ ಮೈಯಾ’ (ನಾನು ಬೆಣ್ಣೆ ಕದ್ದಿಲ್ಲಮ್ಮ) ಎಂಬ ಹಾಡೊಂದು ಬಹು ಜನಜನಿತವಾಗಿದೆ.ಗೋಕುಲದಲ್ಲಿ ಯಶೋಧೆ ಹಾಗೂ ಇತರ ಗೋಪಿಕೆಯರು ಬೆಣ್ಣೆ ತುಂಬಿಸಿಟ್ಟ ಮಡಕೆಯನ್ನು ಎಷ್ಟು ಸುರಕ್ಷಿತವಾಗಿಟ್ಟರೂ ಅದರಿಂದ ಬೆಣ್ಣೆ ಕಳ್ಳತನವಾಗುತ್ತಿತ್ತು. ಬಾಲಕೃಷ್ಣನು ತನ್ನ ಗೆಳೆಯರೊಂದಿಗೆ ಮನೆ-ಮನೆಗೆ ಹೋಗಿ ಬೆಣ್ಣೆ ಕದಿಯುತ್ತಿದ್ದ. ಮರಕ್ಕೆ ಹತ್ತಿ, ಮಡಿಕೆ ಒಡೆದು ಬೆಣ್ಣೆ ತಿಂದು ಸಂತೋಷಪಟ್ಟು ಕುಣಿಯುತ್ತಿದ್ದನು. ಒಂದು ದಿನ ಬಾಲಕೃಷ್ಣನು ಬೆಣ್ಣೆ ಕದಿಯುವ ಸಂದರ್ಭದಲ್ಲಿ ತಾಯಿ ಯಶೋಧೆಯು ಅಲ್ಲಿಗೆ […]

ಮಳೆ ಕೊರತೆ ನಾವೇನು ಮಾಡಬಹುದು…

ಅನಿಲ್ ಕುಮಾರ್ ಎಸ್‍. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಇತ್ತೀಚೆಗೆ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಸಾಮಾನ್ಯ ಮಳೆ ಸುರಿದಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಮಳೆಯಾದ ಪ್ರಮಾಣ ತುಂಬಾ ಕಡಿಮೆ. ಈ ಬಾರಿ ರಾಜ್ಯದಲ್ಲಿ ಶೇ. 32 ರಿಂದ 41ರಷ್ಟು ಮಳೆಯ ಕೊರತೆಯಾಗಬಹುದೆಂದು ಅಂದಾಜಿಸಲಾಗಿದೆ.ಈ ನಿಟ್ಟಿನಲ್ಲಿ ಮುಂದಿನ ದಿನಗಳಿಗಾಗಿ ನಾವು ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಮೊದಲಾಗಿ ತಮಗೆ ಲಭ್ಯವಿರುವ ನೀರನ್ನು ಉಳಿಸುವತ್ತಾ ಗಮನಹರಿಸಬೇಕು. ನಿತ್ಯ ನಾವು ಉಪಯೋಗಿಸುವ ನೀರಿನಲ್ಲಿ ಪ್ರತಿಯೊಬ್ಬರು ಪ್ರತಿ ದಿನ 10 ಲೀಟರ್‌ನಂತೆ ಉಳಿಕೆ […]